ಕೋಲಾರ: ಈ ಗ್ರಾಮದ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ FIR ದಾಖಲು; ಯಾಕೆ ಗೊತ್ತಾ?

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ FIR ದಾಖಲು ಮಾಡಿದ್ದಾರೆ. ಹೌದು, ಕೊಲೆಗೆ ಸಂಬಂಧಪಟ್ಟ ಆರೋಪಿ ನಾಗೇಶ್ ಎಂಬಾತ ಇದ್ದ ಹೊಟೆಲ್ ಮೇಲೆ ಗ್ರಾಮಸ್ಥರು ದಾಳಿ ನಡೆಸಿದ್ದರು.

ಕೋಲಾರ: ಈ ಗ್ರಾಮದ ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ FIR ದಾಖಲು; ಯಾಕೆ ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 15, 2023 | 4:41 PM

ಕೋಲಾರ, ಸೆ.15: ಒಂದು ಸಾವಿರಕ್ಕೂ ಹೆಚ್ಚು ಜನರ ಮೇಲೆ ಎಫ್​ಐಆರ್​ (FIR) ದಾಖಲು ಮಾಡಿದ ಅಪರೂಪದ ಘಟನೆ ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಗೆ ಸಂಬಂಧಪಟ್ಟ ಆರೋಪಿ ನಾಗೇಶ್ ಎಂಬಾತ ಇದ್ದ ಹೊಟೆಲ್ ಮೇಲೆ ದಾಳಿ ನಡೆಸಿದ ಗ್ರಾಮಸ್ಥರು, ಆರೋಪಿ ನಾಗೇಶ್ ಕೊಲೆ ಮಾಡುವ ಉದ್ದೇಶದಿಂದ ಸಾವಿರಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಹಿನ್ನಲೆ ಪಿಎಸ್​ಐ (PSI) ಈಶ್ವರಪ್ಪ ಎಂಬುವವರು ಸೆಕ್ಷನ್ 143, 147, 148, 307, 353, 149 ಅಡಿ ದೂರು ದಾಖಲು ಮಾಡಿದ್ದಾರೆ.

ಪತ್ನಿ ಕೊಲೆಗೈದು ಅವಿತಿಕೊಂಡಿದ್ದ ಆರೋಪಿ ನಾಗೇಶ್

ಹೌದು, ನಂಬಿಹಳ್ಳಿ ಗ್ರಾಮದ ನಿವಾಸಿಯಾದ ಆರೋಪಿ ನಾಗೇಶ್ ಎಂಬಾತ, ತನ್ನ ಪತ್ನಿ ರಾಧಾಳನ್ನು ಕೊಲೆಗೈದು ಹೋಟೆಲ್​ನಲ್ಲಿ ಅವಿತಿಕೊಂಡಿದ್ದ. ಈ ಹಿನ್ನಲೆ ಆತನನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಸಾವಿರಕ್ಕೂ ಹೆಚ್ಚು ಗ್ರಾಮಸ್ಥರು ಹೋಟೆಲ್​ ಬಳಿ ಜಮಾಯಿಸಿದ್ದರು. ಈ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆ ಪಿಎಸ್​ಐ ಈಶ್ವರಪ್ಪ ಅವರು ವಿವಿಧ ಸೆಕ್ಷನ್​ ಅಡಿ ದೂರು ದಾಖಲಿಸಿದ್ದರು. ಇದೀಗ ಬಂಧನ ಭೀತಿ ಹಿನ್ನಲೆ, ಗ್ರಾಮದ ಜನರು ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ:ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಫೋಟೋ, ಹೆಸರು ಬಳಸಿ ನಕಲಿ ಫೇಸ್​ಬುಕ್ ಖಾತೆ ಓಪನ್, ಎಫ್​ಐಆರ್ ದಾಖಲು

ಆನೇಕಲ್​: ರಾಜ್ಯದ ಗಡಿಭಾಗ ತಮಿಳುನಾಡಿನ ಹೊಸೂರು ಸಮೀಪದ ಬಾಗಲೂರಿನಲ್ಲಿ ಪಂಚರ್​ ಶಾಪ್​ನಲ್ಲಿದ್ದ ಏರ್ ಸಿಲಿಂಡರ್​ ಸ್ಫೋಟವಾಗಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಸಿಲಿಂಡರ್ ಬ್ಲಾಸ್ಟ್​ನಿಂದಾಗಿ ಕೈ ಕಾಲು ಮುರಿದುಕೊಂಡು, ಸುಟ್ಟ ಗಾಯಗಳಿಂದ ನರಳಾಟ ನಡೆಸುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಸ್ಟೋಟದ ತೀವ್ರತೆಗೆ ಪಂಚರ್ ಶಾಪ್, ಛಿದ್ರ ಛಿದ್ರವಾಗಿದ್ದು, ಸ್ಥಳಕ್ಕೆ ಬಾಗಲೂರು ಪೋಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ