ಬಿಬಿಎಂಪಿಯಲ್ಲಿನ ಅಕ್ರಮಗಳ ತನಿಖೆಗೆ ಎಸ್ಐಟಿ ರಚಿಸಿಲ್ಲ, ಕೆಲ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರ ನೀಡಲಿ, ಅಷ್ಟೇ: ಡಿಕೆ ಶಿವಕುಮಾರ್
ಕೆಲವು ಕಾಮಗಾರಿಗಳ ಬಿಲ್ ರೂ. 2 ಕೋಟಿ ಇದ್ದರೆ 1.99 ಕೋಟಿ ರೂ, ಬಿಡುಗಡೆ ಮಾಡಿ ಕೇವಲ 1 ಲಕ್ಷ ರೂ. ಮಾತ್ರ ಬಾಕಿ ಉಳಿಸಿದ್ದಾರೆ, ಅದು ಯಾಕೆ ಹಾಗೆ ಅಂತ ತನಗೆ ಅರ್ಥವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಹಿಂದಿನ ಸರಕಾರ ಅವಧಿಯಲ್ಲಿ ಬೃಹತ್ ಬೆಂಗಳೂರು ನಗರ ಪಾಲಿಕೆಯಲ್ಲಿ (BBMP) ನಡೆದ ಕಾಮಗಾರಿಗಳಲ್ಲ್ಲಿ ನಡೆದಿರುವ ಅಕ್ರಮಗಳ ತನಿಖೆ ಮಾಡಲು ತಾನು ಯಾವುದೇ ವಿಶೇಷ ತನಿಖಾ ದಳ (ಎಸ್ ಐಟಿ) (SIT) ರಚಿಸಿಲ್ಲವೆಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು, ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಕೆಲಸ ನಡೆದಿವೆ, ಟೆಂಡರ್ ಕರೆದಿದ್ದು ಯಾವಾಗ, ಕಾಮಗಾರಿ ಪೂರ್ಣಗೊಂಡಿದ್ದು ಯಾವಾಗ, ಕಾಮಗಾರಿ ಶುರುಮಾಡುವ ಮೊದಲು ಗುಂಡಿಗಳಿದ್ದವೇ ಅವುಗಳ ವಿಡಿಯೋ ರೆಕಾರ್ಡಿಂಗ್ ಮಾಡಲಾಗಿದೆಯೇ? ಕಾಮಗಾರಿ ನಡೆಯುವಾಗ ಮುಗಿದಾಗ ಇನ್ಸ್ ಪೆಕ್ಷನ್ ಮಾಡಲಾಗಿದೆಯೇ ಮೊದಲಾದ ಪ್ರಶ್ನೆಗಳನ್ನು ತಾವು ಎತ್ತಿರುವುದಾಗಿ ಹೇಳಿದ ಶಿವಕುಮಾರ್ ಸಂಬಂಧಪಟ್ಟವರು ಉತ್ತರಿಸಲಿ ಎಂದರು. ಕೆಲವು ಕಾಮಗಾರಿಗಳ ಬಿಲ್ ರೂ. 2 ಕೋಟಿ ಇದ್ದರೆ 1.99 ಕೋಟಿ ರೂ, ಬಿಡುಗಡೆ ಮಾಡಿ ಕೇವಲ 1 ಲಕ್ಷ ರೂ. ಮಾತ್ರ ಬಾಕಿ ಉಳಿಸಿದ್ದಾರೆ, ಅದು ಯಾಕೆ ಹಾಗೆ ಅಂತ ತನಗೆ ಅರ್ಥವಾಗಿಲ್ಲ ಎಂದು ಶಿವಕುಮಾರ್ ಹೇಳಿದರು. ಪತ್ರಕರ್ತರೊಬ್ಬರು ಹೆಚ್ ಡಿ ಕುಮಾರಸ್ವಾಮಿ ಮಾಡಿದ ಆರೋಪಗಳ ಬಗ್ಗೆ ಕೇಳಿದಾಗ ಅವರದ್ದು ಬಿಡಿ, ಅವರಷ್ಟು ಅನುಭವ ತನಗಿಲ್ಲ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ