ಸ್ಪಂದನ ಪಾರ್ಥೀವ ಶರೀರ ನಾಳೆ ಬೆಂಗಳೂರಿಗೆ ಬರಲಿದ್ದು ಅಂತಿಮ ಸಂಸ್ಕಾರ ಬುಧವಾರ ನೆರವೇರಿಸಲಾಗುವುದು: ಬಿಕೆ ಹರಿಪ್ರಸಾದ್
ಸ್ಪಂದನ ಅಂತ್ಯಸಂಸ್ಕಾರ ಎಲ್ಲಿ ನಡೆಸಬೇಕು ಅನ್ನೋದು ತೀರ್ಮಾನವಾಗಿಲ್ಲ. ಸ್ಪಂದನಳ ಪಾರ್ಥೀವ ಶರೀರ ನಗರಕ್ಕೆ ಬಂದ ಬಳಿಕ ಕುಟುಂಬ ಸದಸ್ಯರು ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.
ಬೆಂಗಳೂರು: ಸ್ಪಂದನ ವಿಜಯ್ (Spandana Vijay) ಪಾರ್ಥೀವ ಶರೀರ ನಾಳೆ ರಾತ್ರಿ ಬೆಂಗಳೂರಿಗೆ ಬರಲಿದೆ ಎಂದು ಅವರ ಚಿಕ್ಕಪ್ಪ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ (BK Hari Prasad) ಹೇಳಿದರು. ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹರಿಪ್ರಸಾದ್, ಸ್ಪಂದನ ಮರಣೋತ್ತರ ಪರೀಕ್ಷೆ (post mortem) ಕೊನೆಗೊಂಡಿದೆ, ವಿಧಿವಿಧಾನ ಪ್ರಕ್ರಿಯೆ ಬಾಕಿಯಿದೆ, ಅಟಾಪ್ಸಿ ವರದಿಯನ್ನು ನಾಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗುವುದು ಎಂದರು. ಸ್ಪಂದನ ಅಂತ್ಯಸಂಸ್ಕಾರ ಎಲ್ಲಿ ನಡೆಸಬೇಕು ಅನ್ನೋದು ತೀರ್ಮಾನವಾಗಿಲ್ಲ. ಸ್ಪಂದನಳ ಪಾರ್ಥೀವ ಶರೀರ ನಗರಕ್ಕೆ ಬಂದ ಬಳಿಕ ಕುಟುಂಬ ಸದಸ್ಯರು ಒಂದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು. ಅಂತಿಮ ವಿಧಿ ವಿಧಾನಗಳನ್ನು ಬುಧವಾರ ನಡೆಸಲಾಗುವುದು ಅಂತ ಹೇಳಿದ ಅವರು ದೇಹವನ್ನು ತೆಗೆದುಕೊಂಡು ಬರಲು ಇಲ್ಲಿಂದ ಯಾರೂ ಹೋಗುತ್ತಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos