Loading video

‘ಎಲ್ಲವೂ ಭಾರತದ ಸಿನಿಮಾ ಎಂದು ಕರೆಯಬೇಕು’; ಅಭಿಪ್ರಾಯ ತಿಳಿಸಿದ ಅರ್ಜುನ್ ಸರ್ಜಾ

|

Updated on: Feb 24, 2023 | 8:31 AM

‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಮಾಸ್ ಆ್ಯಕ್ಷನ್​ನಿಂದ ಮಿಂಚಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಈ ಸಿನಿಮಾ ಟ್ರೇಲರ್ ಲಾಂಚ್​ನಲ್ಲಿ ಅರ್ಜುನ್ ಸರ್ಜಾ ಅವರು ಭಾರತ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ

ಧ್ರುವ ಸರ್ಜಾ (Dhruva Sarja) ನಟನೆಯ ‘ಮಾರ್ಟಿನ್’ (Martin Movie) ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾದ ಟೀಸರ್​ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಮಾಸ್ ಆ್ಯಕ್ಷನ್​ನಿಂದ ಮಿಂಚಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಈ ಸಿನಿಮಾ ಟ್ರೇಲರ್ ಲಾಂಚ್​ನಲ್ಲಿ ಅರ್ಜುನ್ ಸರ್ಜಾ ಅವರು ಭಾರತ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ‘ಇದು ಬಾಲಿವುಡ್ ಸಿನಿಮಾ, ಇದು ಕನ್ನಡ ಸಿನಿಮಾ ಎಂದು ಬೇರ್ಪಡಿಸುವುದು ನನಗೆ ಸಮಂಜಸ ಅನಿಸುತ್ತಿಲ್ಲ. ಎಲ್ಲ ಸಿನಿಮಾಗಳು ಭಾರತದ ಸಿನಿಮಾ ಎಂದು ಕರೆಯಬೇಕು’ ಎಂಬುದಾಗಿ ಅರ್ಜುನ್ ಸರ್ಜಾ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ