ಹೆಲ್ಮೆಟ್ ಧರಿಸಿದ್ದರೂ ಸಿಸಿಟಿವಿಯಲ್ಲಿ ಕಳ್ಳನ ಮುಖ ಸೆರೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಅರುಣ್​ ಕುಮಾರ್​ ಬೆಳ್ಳಿ

Updated on: Oct 26, 2024 | 12:28 PM

ಸಿಸಿಟಿವಿಯಲ್ಲಿ ತನ್ನ ಗುರುತು ಪತ್ತೆ ಹತ್ತಬಾರದು ಅಂತ ಕಳ್ಳ ಹೆಲ್ಮೆಟ್ ಧರಿಸಿ ಹೋಟೆಲ್​ನೊಳಗೆ ನುಸುಳಿದ್ದಾನೆ. ಆದರೆ ಅವನು ಕೆಮೆರಾದ ಮುಂದೆ ನಿಂತು ಅದನ್ನು ದಿಟ್ಟಿಸಿ ನೋಡಿದ್ದು ಸೆರೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿರುವ ಕಾರಣ ಅವನನ್ನು ಪತ್ತೆ ಹಚ್ಚೋದು ಪೊಲೀಸರಿಗೆ ಸಮಸ್ಯೆ ಆಗಲಾರದು.

ಮಂಗಳೂರು: ಇವನ್ಯಾವನೋ ಚಿಲ್ಲರೆ ಕಳ್ಳ ಮಾರಾಯ್ರೇ! ಅವನು ಏನು ಕದಿಯುತ್ತಿದ್ದಾನೆ ಅಂತ ಗಮನಿಸಿ. ಹೋಟೆಲ್ ಗಲ್ಲಾಪಟ್ಟಿಗೆಯಲ್ಲಿರುವ ಚಿಲ್ಲರೆ ನಾಣ್ಯಗಳು! ಗಲ್ಲಾಪಟ್ಟಿಗೆಯಲ್ಲಿ ನಾಣ್ಯಗಳನ್ನು ಹಾಕಲು ಬಟ್ಟಲುಗಳಿರುತ್ತದೆ. ಕಳ್ಳ ಅವೇ ಬಟ್ಟಲುಗಳಿಂದ ನಾಣ್ಯಗಳನ್ನು ತೆಗೆದು ಒಂದು ಪಾಲಿಥೀನ್ ಬ್ಯಾಗ್​ಗೆ ಸುರುವಿಕೊಳ್ಳುತ್ತಿದ್ದಾನೆ. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ದೇವರ ಸ್ಟ್ಯಾಂಡ್​ನಲ್ಲಿಟ್ಟಿದ್ದ ಹುಂಡಿಯನ್ನೂ ಕಳ್ಳ ಕದ್ದೊಯ್ದಿದ್ದಾನಂತೆ. ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕದಲ್ಲಿರುವ ಲಕ್ಷ್ಮಿ ನಿವಾಸ ಹೋಟೆಲ್​ನಲ್ಲಿ ಕಳ್ಳತನ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಹನುಮಾನ್ ದೇವಾಲಯದಲ್ಲಿ ಅರ್ಚಕನ ಕೊಲೆ; ಕಳ್ಳತನದ ದೂರು ನೀಡಿದ್ದರೂ ತಲೆಕೆಡಿಸಿಕೊಳ್ಳದ ಪೊಲೀಸರು

Published on: Oct 26, 2024 12:27 PM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.