ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

Updated on: Nov 01, 2026 | 5:11 PM

ಟಿವಿ9 ಡಿಜಿಟಲ್‌ನ ಈ ವಾರದ ಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 2 ರಿಂದ 8, 2026ರವರೆಗಿನ ದ್ವಾದಶ ರಾಶಿಗಳ ಫಲಾಫಲ, ಪ್ರಮುಖ ಹಬ್ಬಗಳು ಮತ್ತು ಗ್ರಹಗಳ ಗೋಚಾರದ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಗುರು ಚಂಡಾಲ ಯೋಗದ ಪರಿಣಾಮಗಳು ಮತ್ತು ಶುಕ್ರನ ವಕ್ರಿ ಸಂಚಾರದ ಪ್ರಭಾವವನ್ನು ಸಹ ವಿವರಿಸಲಾಗಿದೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 2 ರಿಂದ ನವೆಂಬರ್ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ವಾರದಲ್ಲಿ ಕಾಲಾಷ್ಟಮಿ, ಗೋಕರ್ಣದಲ್ಲಿ ಗಂಗಾ ಜಯಂತೋತ್ಸವ, ಶ್ರೀರಂಗಪಟ್ಟಣದಲ್ಲಿ ಅಷ್ಟ ತೀರ್ಥೋದ್ಭವ, ಧನ್ವಂತರಿಯ ಜಯಂತೋತ್ಸವ, ರಮಾ ಏಕಾದಶಿ, ಧನತ್ರಯೋದಶಿ, ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆಯಂತಹ ಪ್ರಮುಖ ಹಬ್ಬಗಳು ಮತ್ತು ವಿಶೇಷ ಪರ್ವಕಾಲಗಳು ನಡೆಯಲಿವೆ.

ಗ್ರಹಗಳ ಗೋಚಾರದ ಕುರಿತು ವಿವರಿಸಿದ ಗುರೂಜಿ, ಗುರು ಗ್ರಹ ಸಿಂಹ ರಾಶಿಯಲ್ಲಿ ಕೇತುವಿನೊಟ್ಟಿಗೆ ಗುರು ಚಂಡಾಲ ಯೋಗವನ್ನು ಉಂಟುಮಾಡಿದೆ. ಶುಕ್ರ, ಬುಧ ಮತ್ತು ರವಿ ಗ್ರಹಗಳು ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಶುಕ್ರ ಗ್ರಹ ನವೆಂಬರ್ 6 ರಂದು ಕನ್ಯಾ ರಾಶಿಗೆ ವಕ್ರಿಯಾಗಿ ಪ್ರವೇಶಿಸಲಿದೆ ಎಂದು ತಿಳಿಸಿದರು. ಶನಿ ಗ್ರಹ ಮೀನ ರಾಶಿಯಲ್ಲಿ, ರಾಹು ಗ್ರಹ ಕುಂಭ ರಾಶಿಯಲ್ಲಿ ಸಂಚಾರ ಮಾಡಲಿವೆ. ಮೇಷ ರಾಶಿಯವರಿಗೆ ಗುರುಬಲ ಶುರುವಾಗಿದ್ದು ಶುಭಫಲಗಳು, ವೃಷಭ ರಾಶಿಯವರಿಗೆ ಅನಗತ್ಯ ಟೆನ್ಷನ್ ತಪ್ಪಿಸುವ ಸಲಹೆ, ಮಿಥುನ ರಾಶಿಯವರಿಗೆ ಕಾರ್ಯಸಿದ್ದಿ, ಕರ್ಕಾಟಕ ರಾಶಿಯವರಿಗೆ ಅದೃಷ್ಟ, ಸಿಂಹ ರಾಶಿಯವರಿಗೆ ಮಿಶ್ರಫಲ ಹಾಗೂ ಕನ್ಯಾ ರಾಶಿಯವರಿಗೆ ಆತುರದ ನಿರ್ಧಾರಗಳನ್ನು ತಪ್ಪಿಸಲು ಸೂಚಿಸಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Nov 01, 2026 05:06 PM
Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More