15 ದಿನ ಪಶ್ಚಿಮ ಬಂಗಾಳದಲ್ಲೇ ಇರ್ತೀನಿ, ಮಮತಾಗೆ ಬೈ-ಬೈ ಹೇಳಿಯೇ ಬರ್ತೀನಿ: ಅಮಿತ್ ಶಾ

Updated on: Apr 02, 2026 | 3:05 PM

ಪಶ್ಚಿಮ ಬಂಗಾಳದಲ್ಲಿ 2026ರ ಚುನಾವಣೆಗೂ ಮುನ್ನ ರಾಜಕೀಯ ವಾತಾವರಣ ಬಿಸಿಯಾಗುತ್ತಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಪ್ರಮುಖ ವಿರೋಧಪಕ್ಷ ಬಿಜೆಪಿ ನಡುವೆ ನೇರ ಹೋರಾಟ ಕಂಡುಬರುತ್ತಿದೆ. ಶುಭೇಂದು ಅಧಿಕಾರಿಯ ನಾಮಪತ್ರ ಸಲ್ಲಿಕೆ ಇದ್ದ ಕಾರಣ ನಂದಿಗ್ರಾಮಕ್ಕೆ ಹೋಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇನ್ನು 15 ದಿನ ಇಲ್ಲೇ ಇರುತ್ತೇನೆ, ಪಶ್ಚಿಮ ಬಂಗಾಳದಲ್ಲಿಯೇ ಉಳಿದು ಚುನಾವಣಾ ಉಸ್ತುವಾರಿವಹಿಸಿಕೊಳ್ಳುವುದಾಗಿ ಘೋಷಿಸಿದರು. ತಾನು ಇಡೀ ಬಂಗಾಳವನ್ನು ಪ್ರವಾಸ ಮಾಡಿರುವುದಾಗಿ ಹೇಳಿದ್ದು, ಎಲ್ಲ ಕಡೆಯೂ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೊನೆಗೊಳಿಸುವ ಬಗ್ಗೆಯೇ ಬೇಡಿಕೆಗಳು ಕೇಳಿಬಂದಿವೆ.

ಕೋಲ್ಕತ್ತಾ, ಏಪ್ರಿಲ್ 02:ಪಶ್ಚಿಮ ಬಂಗಾಳದಲ್ಲಿ 2026ರ ಚುನಾವಣೆಗೂ ಮುನ್ನ ರಾಜಕೀಯ ವಾತಾವರಣ ಬಿಸಿಯಾಗುತ್ತಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಹಾಗೂ ಪ್ರಮುಖ ವಿರೋಧಪಕ್ಷ ಬಿಜೆಪಿ ನಡುವೆ ನೇರ ಹೋರಾಟ ಕಂಡುಬರುತ್ತಿದೆ. ಶುಭೇಂದು ಅಧಿಕಾರಿಯ ನಾಮಪತ್ರ ಸಲ್ಲಿಕೆ ಇದ್ದ ಕಾರಣ ನಂದಿಗ್ರಾಮಕ್ಕೆ ಹೋಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಇನ್ನು 15 ದಿನ ಇಲ್ಲೇ ಇರುತ್ತೇನೆ, ಪಶ್ಚಿಮ ಬಂಗಾಳದಲ್ಲಿಯೇ ಉಳಿದು ಚುನಾವಣಾ ಉಸ್ತುವಾರಿವಹಿಸಿಕೊಳ್ಳುವುದಾಗಿ ಘೋಷಿಸಿದರು.
ತಾನು ಇಡೀ ಬಂಗಾಳವನ್ನು ಪ್ರವಾಸ ಮಾಡಿರುವುದಾಗಿ ಹೇಳಿದ್ದು, ಎಲ್ಲ ಕಡೆಯೂ ಮಮತಾ ಬ್ಯಾನರ್ಜಿ ಸರ್ಕಾರವನ್ನು ಕೊನೆಗೊಳಿಸುವ ಬಗ್ಗೆಯೇ ಬೇಡಿಕೆಗಳು ಕೇಳಿಬಂದಿವೆ.

ಬಂಗಾಳದ ಜನರು ಟಿಎಂಸಿಯ ಗೂಂಡಾಗಿರಿಯಿಂದ ಸಂಪೂರ್ಣವಾಗಿ ಬೇಸತ್ತಿದ್ದಾರೆ, ಆಗಾಗ ಸ್ಫೋಟಗಳು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಬಿಜೆಪಿ ಸರ್ಕಾರವು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುತ್ತದೆ, ಅಭಿವೃದ್ಧಿಯ ಹೊಸ ಅಲೆಯನ್ನು ತರುತ್ತದೆ. ಇದರಿಂದ ಬಂಗಾಳವುತನ್ನ ಹಿಂದಿನ ಗುರುತನ್ನು ಮರಳಿ ಪಡೆಯಬಹುದು ಎಂದು ಭರವಸೆ ನೀಡಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Apr 02, 2026 03:05 PM
Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More