WITT 2024: ಕ್ರಿಕೆಟಿಗನಾಗ ಬಯಸಿದ್ದೆ, ಆದರೆ ರಾಜಕಾರಣಿಯಾದೆ: ಕೇಂದ್ರ ಸಚಿವ ಅನುರಾಗ್ ಠಾಕೂರ್

|

Updated on: Feb 25, 2024 | 9:07 PM

ಟಿವಿ9 ನೆಟ್‌ವರ್ಕ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಶೃಂಗಸಭೆಯಲ್ಲಿ ಭಾಗಿವಹಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ನಾನು ಕ್ರಿಕೆಟ್ ಬಿಡಲು ಬಯಸಲಿಲ್ಲ, ಆದರೆ ಕುಟುಂಬದ ಪರಿಸ್ಥಿತಿಗಳಿಂದ ನಾನು ಆಟವನ್ನು ಬಿಡಬೇಕಾಯಿತು. ನಾನು ಕ್ರಿಕೆಟಿಗನಾಗಲು ಬಯಸಿದ್ದೆ. ನನ್ನ ತಂದೆ ನನ್ನನ್ನು ಸೈನ್ಯಕ್ಕೆ ಕಳುಹಿಸಲು ಬಯಸಿದ್ದರು. ಆದರೆ ನಾನು ರಾಜಕಾರಣಿಯಾದೆ ಎಂದು ಹೇಳಿದರು.

ದೆಹಲಿ, ಫೆಬ್ರವರಿ 25: ಟಿವಿ9 ನೆಟ್‌ವರ್ಕ್ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today Global Summit) ಶೃಂಗಸಭೆ ಇಂದು ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ಇದರ ಭಾಗವಾಗಿ ನಡೆದ ಸಂವಾದ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿದ್ದರು. ನಾನು ಕ್ರಿಕೆಟಿಗನಾಗಲು ಬಯಸಿದ್ದೆ. ನನ್ನ ತಂದೆ ನನ್ನನ್ನು ಸೈನ್ಯಕ್ಕೆ ಕಳುಹಿಸಲು ಬಯಸಿದ್ದರು. ಆದರೆ ನಾನು ರಾಜಕಾರಣಿಯಾದೆ ಎಂದು ಹೇಳಿದರು. ನಾನು ಕ್ರಿಕೆಟ್ ಬಿಡಲು ಬಯಸಲಿಲ್ಲ, ಆದರೆ ಕುಟುಂಬದ ಪರಿಸ್ಥಿತಿಗಳಿಂದ ನಾನು ಆಟವನ್ನು ಬಿಡಬೇಕಾಯಿತು. 25ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾದೆ. ಇದಾದ ನಂತರ 26ನೇ ವಯಸ್ಸಿನಲ್ಲಿ ಧರ್ಮಶಾಲಾದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಿದೆವು ಎಂದು ಹೇಳಿದ್ದಾರೆ. ದೇಶದಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇಂದು ಖೇಲೋ ಇಂಡಿಯಾ ಸೇರಿದಂತೆ ಸರ್ಕಾರವು ಇಂತಹ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಆಟಗಾರರಿಗೆ ಎಲ್ಲಾ ವ್ಯವಸ್ಥೆಗಳನ್ನು ನೀಡಲಾಗುತ್ತಿದ್ದು, ಅದರ ಫಲಿತಾಂಶ ನೋಡುತ್ತಿದ್ದೇವೆ. ಏಷ್ಯನ್ ಗೇಮ್ಸ್​​ನಲ್ಲಿ ಭಾರತ 100ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿರುವುದು ಇದೇ ಮೊದಲು. ಹಿಂದಿನ ಆಟಗಾರರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಆದರೆ ಇಂದು ಖೇಲೋ ಇಂಡಿಯಾ ಯೋಜನೆಯಡಿ ಆಟಗಾರರ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on