Daily Devotional: ಅಂಗಡಿ ಬಾಗಿಲು ಪಶ್ಚಿಮ ದಿಕ್ಕಿಗೆ ಇದ್ದರೆ ಏನು ಲಾಭ ಗೊತ್ತಾ? ವಿಡಿಯೋ ನೋಡಿ

Daily Devotional: ಅಂಗಡಿ ಬಾಗಿಲು ಪಶ್ಚಿಮ ದಿಕ್ಕಿಗೆ ಇದ್ದರೆ ಏನು ಲಾಭ ಗೊತ್ತಾ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: May 03, 2024 | 7:02 AM

ವಾಸ್ತುವು ಅಂಗಡಿಯ ವಿನ್ಯಾಸ, ಪ್ರವೇಶ, ಹೊರಾಂಗಣ ವ್ಯವಸ್ಥೆಗಾಗಿ ನಿರ್ದಿಷ್ಟ ಸಲಹೆಗಳನ್ನು ನೀಡುತ್ತದೆ. ಇದರಿಂದಾಗಿ ಹೆಚ್ಚಿಗೆ ವ್ಯಾಪಾರವಾಗುತ್ತದೆ ಅಂತ ನಂಬಿಕೆ. ಮತ್ತು ಮಾಲೀಕರ ಮನಸ್ಸಿಗೆ ಶಾಂತಿ ಸಿಗುತ್ತದೆ. ಹಾಗಿದ್ದರೆ ಅಂಗಡಿಗಳು ವಾಸ್ತು ಪ್ರಕಾರ ಯಾವ ದಿಕ್ಕಿಗೆ ಮುಖ ಮಾಡಿದ್ದರೆ ಯಾವ ರೀತಿಯಲ್ಲಿ ವ್ಯವಸ್ಥೆಗೊಳಿಸಬೇಕು ಎಂಬುದನ್ನು ಬಸವರಾಜ ಗುರೂಜಿ ತಿಳಿಸಿದ್ದಾರೆ.

ಸ್ತ್ರೀ ಪುರುಷರಾದಿಯಾಗಿ ಎಲ್ಲಾ ಜಾತಿ ಪಂಗಡಗಳವರಿಗೂ ಅವರಿಗಿಷ್ಟವಾದ ವ್ಯಾಪಾರ ವಹಿವಾಟು ಮಾಡುವ ಸರ್ವತಂತ್ರ ಸ್ವತಂತ್ರ ಇಂದು ಲಭ್ಯವಾಗಿದೆ. ಇಂತಹ ಸಂದರ್ಭದಲ್ಲಿ ಅಂಗಡಿ, ಮಳಿಗೆ ವಹಿವಾಟು ಸರ್ವೇಸಾಮಾನ್ಯ. ಹಾಗಾದರೆ ಇಂತಹ ಅಂಗಡಿಗಳು ವಾಸ್ತು ಪ್ರಕಾರ ಯಾವ ದಿಕ್ಕಿಗೆ ಮುಖ ಮಾಡಿದ್ದರೆ ಯಾವ ರೀತಿಯಲ್ಲಿ ವ್ಯವಸ್ಥೆಗೊಳಿಸಬೇಕು ಎಂಬುದನ್ನು ಗಮನಿಸಬೇಕು. ಪ್ರಮುಖ ದಿಕ್ಕುಗಳು ನಾಲ್ಕು. ಪಶ್ಚಿಮ ಮುಖದ ಅಂಗಡಿ, ಇಲ್ಲಿ ರಸ್ತೆ ಉತ್ತರ ದಕ್ಷಿಣವಾಗಿಯೇ ಹರಡಿಕೊಂಡಿರುತ್ತದೆ. ಫಲಭಾಗ ಪೂರ್ವ ಮುಖದ ಅಂಗಡಿಯಂತೆಯೆ .ಆದರೆ ನಗದಿಪೆಟ್ಟಿಗೆ ಮಾತ್ರ ನೈಋತ್ಯದಲ್ಲಿ ಕುಳಿತು ಉತ್ತರಕ್ಕೆ ನೋಡುವಂತಿರಬೇಕು. ಯಜಮಾನ ನೈಋತ್ಯದಲ್ಲಿ ಕುಳಿತು ಕೊಂಡರೆ ಶ್ರೇಷ್ಠ. ಆಗ್ನೇಯದಲ್ಲಿಯೂ ಉತ್ತರ ಮುಖಮಾಡಿ ಕುಳಿತುಕೊಳ್ಳಬಹುದು. ದಾಸ್ತಾನು ಕೊಠಡಿ ದಕ್ಷಿಣದಲ್ಲಿ ಮಾತ್ರ ಏರ್ಪಡಿಸಿಕೊಳ್ಳಬೇಕು