TV9 Real Estate Expo: ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?

Edited By:

Updated on: Aug 22, 2026 | 4:05 PM

ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್ ಪೋ ಆರಂಭವಾಗಿದೆ. ಇಂದು ಮತ್ತು ನಾಳೆವರೆಗೂ ನಡೆಯುವ ಎಕ್ಸ್‌ ಪೋವನ್ನು ದಕ್ಷಿಣ ವಲಯ ಡಿಐಜಿ ಡಾ ಬೋರಲಿಂಗಯ್ಯ ಹಾಗೂ ಕಲಾವಿದ ಅರುಣ್ ಯೋಗಿರಾಜ್ ಉದ್ಘಾಟಿಸಿದ್ದಾರೆ. ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರೋ ಎಕ್ಸ್‌ ಪೋ ಪ್ರೆಸಿಂಟಿಗ್ ಸ್ಪಾನ್ಸರ್ ಹಾಗೂ ಶರಣ್ಯ ಫಾರ್ಮ್ಸ್‌ನ ಮಾಲೀಕರಾದ ವಿ.ಎಂ ರಾಜೇಶ್, ಟಿವಿ9 ಮಾರ್ಕೆಂಟಿಂಗ್ ಅಸೋಷಿಯೇಟ್ ವೈಸ್‌ ಪ್ರೆಸಿಡೆಂಟ್‌ ಶ್ರೀಧರ್ ನಾಡಿಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೈಸೂರು, (ಆಗಸ್ಟ್ 22): ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಂ ರಿಯಲ್ ಎಸ್ಟೇಟ್ ಎಕ್ಸ್ ಪೋ ಆರಂಭವಾಗಿದೆ. ಇಂದು ಮತ್ತು ನಾಳೆವರೆಗೂ ನಡೆಯುವ ಎಕ್ಸ್‌ ಪೋವನ್ನು ದಕ್ಷಿಣ ವಲಯ ಡಿಐಜಿ ಡಾ ಬೋರಲಿಂಗಯ್ಯ ಹಾಗೂ ಕಲಾವಿದ ಅರುಣ್ ಯೋಗಿರಾಜ್ ಉದ್ಘಾಟಿಸಿದ್ದಾರೆ. ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ನಡೆಯುತ್ತಿರೋ ಎಕ್ಸ್‌ ಪೋ ಪ್ರೆಸಿಂಟಿಗ್ ಸ್ಪಾನ್ಸರ್ ಹಾಗೂ ಶರಣ್ಯ ಫಾರ್ಮ್ಸ್‌ನ ಮಾಲೀಕರಾದ ವಿ.ಎಂ ರಾಜೇಶ್, ಟಿವಿ9 ಮಾರ್ಕೆಂಟಿಂಗ್ ಅಸೋಷಿಯೇಟ್ ವೈಸ್‌ ಪ್ರೆಸಿಡೆಂಟ್‌ ಶ್ರೀಧರ್ ನಾಡಿಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎಕ್ಸ್​ಪೋಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಪಾರ್ಕಿಂಗ್ ಕೂಡ ಉಚಿತವಾಗಿದೆ.

ಇನ್ನು ಮನೆ ಖರೀದಿಗೆ 100ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳ ಹೂಡಿಕೆಗೆ ಅವಕಾಶವಿದೆ. ಮನೆ, ನಿವೇಶನ ವಿಲ್ಲಾಗಳು, ಫಾರ್ಮ್‌ಲ್ಯಾಂಡ್, ಫಾರ್ಮ್‌ಹೌಸ್‌ಗಳು, ವಸತಿ ಹಾಗೂ ವಾಣಿಜ್ಯ ಆಸ್ತಿಗಳ ಆಯ್ಕೆ ಇರರಲಿದೆ. ಹಾಗೇ ಪ್ರತಿಷ್ಠಿತ ಬ್ಯಾಂಕ್‌ಗಳಿಂದ ಪ್ರಾಪರ್ಟಿ ಲೋನ್ ಆಯ್ಕೆಗಳ ಮಾಹಿತಿ ನೀಡಲಾಗುತ್ತದೆ. ಪ್ರತಿಷ್ಠಿತ ಬ್ಯಾಂಕ್​ಗಳಿಂದ ಲಭ್ಯವಿರುವ ಪ್ರಾಪರ್ಟಿ ಲೋನ್​​ಗಳು ಮತ್ತು ಸಾಲ ಸೌಲಭ್ಯಗಳ ಕುರಿತು ಮಾಹಿತಿ ಒಂದೇ ಸೂರಿನಡಿ ಸಿಗಲಿದೆ. ಎಕ್ಸ್ ಪೋಗೆ ಭೇಟಿ ನೀಡುವವರಿಗೆ ಆಕರ್ಷಕ ಉಡುಗೊರೆ ಗೆಲ್ಲುವ ಸುವರ್ಣಾವಕಾಶ ಸಹ ಸಿಗಲಿದೆ.

Loading...
Unable to load recommendations.
Follow Us
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More