ಪುನೀತ್​ಗೆ ಮೊದಲು ಅಪ್ಪು ಅಂತ ಕರೆದಿದ್ದು ಯಾರು? ಈ ಹೆಸರೆಂದರೆ ಹೇಳಲಾಗದಷ್ಟು ಸೆಂಟಿಮೆಂಟ್​

| Updated By: ಮದನ್​ ಕುಮಾರ್​

Updated on: Oct 31, 2021 | 4:06 PM

Puneeth Rajkumar: ಪುನೀತ್​ ರಾಜ್​ಕುಮಾರ್​ ಅವರಿಗೆ ‘ಅಪ್ಪು ಅಣ್ಣ, ಅಪ್ಪು ಬಾಸ್​’ ಎಂದು ಅಭಿಮಾನಿಗಳು ಜೈಕಾರ ಕೂಗುತ್ತಾರೆ. ಅಪ್ಪು ಅಂಕಲ್​, ಅಪ್ಪು ಮಾಮ ಎಂದು ಮಕ್ಕಳು ಪ್ರೀತಿಯಿಂದ ಕರೆಯುತ್ತಾರೆ.

ಪುನೀತ್​ ರಾಜ್​ಕುಮಾರ್​ ಬಾಲನಟ ಆಗಿದ್ದಾಗಿನಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದರು. ಆ ದಿನಗಳಲ್ಲಿ ಅವರನ್ನು ಲೋಹಿತ್​ ಎಂದು ಕರೆಯಲಾಗುತ್ತಿತ್ತು. ಮನೆಯಲ್ಲಿ ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಬಳಿಕ ಪುನೀತ್​ ರಾಜ್​ಕುಮಾರ್​ ಎಂಬ ಹೆಸರಿನಿಂದ ದೇಶಾದ್ಯಂತ ಖ್ಯಾತಿ ಗಳಿಸಿದರು. ಅವರನ್ನು ಅಪ್ಪು ಎಂದು ಕರೆಯುವುದರಲ್ಲಿ ಏನೋ ಒಂದು ರೀತಿಯ ಸೆಂಟಿಮೆಂಟ್​ ಇದೆ. ಅಪ್ಪು ಅಣ್ಣ, ಅಪ್ಪು ಬಾಸ್​ ಎಂದು ಅಭಿಮಾನಿಗಳು ಜೈಕಾರ ಕೂಗುತ್ತಾರೆ. ಅಪ್ಪು ಅಂಕಲ್​, ಅಪ್ಪು ಮಾಮ ಎಂದು ಮಕ್ಕಳು ಪ್ರೀತಿಯಿಂದ ಕರೆಯುತ್ತಾರೆ.

ಮೊದಲ ಬಾರಿಗೆ ಪುನೀತ್ ರಾಜ್​ಕುಮಾರ್​ ಅವರನ್ನು ಅಪ್ಪು ಎಂದು ಕರೆದಿದ್ದು ಅವರ ಅಜ್ಜಿ. ರಾಜ್​ಕುಮಾರ್ ಅವರ ತಾಯಿ ಲಕ್ಷ್ಮಮ್ಮ ಅವರಿಗೆ ಪುನೀತ್​ ಎಂದರೆ ಎಲ್ಲಿಲ್ಲದ ಪ್ರೀತಿ. ಹಾಗಾಗಿ ಅವರು ಮೊಮ್ಮಗನನ್ನು ಅಪ್ಪು ಅಂತ ಕರೆಯುತ್ತಿದ್ದರು. ಮನೆಮಂದಿಗೆಲ್ಲ ಆ ಪ್ರೀತಿಯ ಹೆಸರು ಅಚ್ಚುಮೆಚ್ಚಾಗಿತ್ತು. ಪುನೀತ್​ ಎಷ್ಟೇ ಎತ್ತರಕ್ಕೆ ಬೆಳೆದುನಿಂತರೂ ಆ ಪೆಟ್​ ನೇಮ್​ ಹೋಗಲೇ ಇಲ್ಲ. ಅವರು ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ಹೆಸರು ಕೂಡ ‘ಅಪ್ಪು’. ಆದರೆ ಇಂದು ಆ ಹೆಸರಿನಿಂದ ಕರೆಸಿಕೊಳ್ಳಲು ಅವರೇ ನಮ್ಮೊಂದಿಗಿಲ್ಲ.

ಇದನ್ನೂ ಓದಿ:

ವಿದೇಶಿ ನ್ಯೂಸ್​ ಚಾನೆಲ್​ಗಳಲ್ಲಿ ಪುನೀತ್​ ನಿಧನದ ಸುದ್ದಿ; ಸೌತ್​ ಕೊರಿಯಾದಲ್ಲೂ ಅಭಿಮಾನದ ಹೊಳೆ

Puneeth Rajkumar Funeral: ಅಪ್ಪನ ಸಮಾಧಿಗೆ ಪುನೀತ್ ಪುತ್ರಿಯರಿಂದ ಪೂಜೆ; ಕಂಠೀರವ ಸ್ಟುಡಿಯೋದಲ್ಲಿ ಕಣ್ಣೀರ ವಿದಾಯ

Published on: Oct 31, 2021 04:00 PM