Bengaluru: ಬ್ರೀಫ್ ಕೇಸ್ ನೀಡಿ ಮೇಲ್ಮನೆಗೆ ಸ್ವಾಗತಿಸಿದ ಬಸವರಾಜ ಹೊರಟ್ಟಿಯನ್ನು ಅದರೊಳಗಡೆ ಏನಿದೆ ಅಂತ ಕೇಳಿದರು ನೂತನ ಎಂಎಲ್ ಸಿ ಜಗದೀಶ್ ಶೆಟ್ಟರ್!
ಹೊರಟ್ಟಿಯವರು ಶೆಟ್ಟರ್ ಮಾತಿಗೆ ನಕ್ಕರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಗದ ಪತ್ರಗಳಿರುತ್ತವೆ ಎಂದು ನಗುತ್ತಲೇ ಹೇಳುತ್ತಾರೆ.
ಬೆಂಗಳೂರು: ಇತ್ತೀಚಿಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿ ವಿಧಾನ ಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ (Jagadish Shettar) ಇಂದು ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ವಿಧಾನ ಪರಿಷತ್ ಚೇರ್ಮನ್ ಬಸವರಾಜ ಹೊರಟ್ಟಿ (Basavaraj Horatti) ಅವರು ಶೆಟ್ಟರ್ ಅವರನ್ನು ಮೇಲ್ಮನೆಗೆ ಸ್ವಾಗತಿಸುವ ಭಾಗವಾಗಿ ಸಾಂಪ್ರದಾಯಿಕ ಬ್ರೀಫ್ ಕೇಸೊಂದನ್ನು ನೀಡುತ್ತಾರೆ. ಸಭಾಪತಿಗಳ ಎಡಪಕ್ಕ ಕೂತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೂಡ ಎದ್ದುನಿಂತು ಬ್ರೀಫ್ ಕೇಸ್ ಗೆ ಕೈ ಹಚ್ಚುತ್ತಾರೆ. ಅದನ್ನು ಸ್ವೀಕರಿಸುವಾಗ ಶೆಟ್ಟರ್, ಇದರಲ್ಲಿ ಏನಿದೆ ಅಂತ ವಿನೋದದ ಧಾಟಿಯಲ್ಲಿ ಕೇಳುತ್ತಾರೆ. ಹೊರಟ್ಟಿಯವರು ಅವರು ಮಾತಿಗೆ ನಕ್ಕರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಗದ ಪತ್ರಗಳಿರುತ್ತವೆ ಎಂದು ನಗುತ್ತಲೇ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ