Ravi slams Shettar: ಎಮ್ಮೆಲ್ಸಿ ಅಗಿದ್ದಕ್ಕೆ ಕುಣಿದು ಕುಪ್ಪಳಿಸುತ್ತಿರುವ ಜಗದೀಶ್ ಶೆಟ್ಟರ್ ಗೆ ಮುಖ್ಯಮಂತ್ರಿಯಾಗುವ ಚಾನ್ಸ್ ಕೂಡ ಇದೆ! ಸಿಟಿ ರವಿ
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರೆ ತಾನು ತುಂಬಾ ಸಂತೋಷಪಡುವುದಾಗಿ ರವಿ ಕುಹುಕವಾಡಿದರು.
ಬೆಂಗಳೂರು: ಮಾಜಿ ಶಾಸಕ ಸಿಟಿ ರವಿ (CT Ravi) ಇಂದು ಬೆಂಗಳೂರಲ್ಲಿ ಸುದ್ದಿಗೋಷ್ಟಿ ನಡೆಸಿದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ವಿಧಾನ ಸಭಾ ಚುನಾವಣೆಯಲ್ಲಿ ಸೋತರೂ ಯಕಶ್ವಿತ್ ವಿಧಾನ ಪರಿಷತ್ ಸದಸ್ಯನಾಗಿರುವುದಕ್ಕೆ ಜಗದೀಶ್ ಶೆಟ್ಟರ್ (Jagadish Shettar) ಹಿರಿಹಿರಿ ಹಿಗ್ಗುತ್ತಿದ್ದಾರೆ ಎಂದು ರವಿ ಟೀಕಿಸಿದರು. ಬಿಜೆಪಿಯಲ್ಲಿ ಎಲ್ಲ ಅಧಿಕಾರಗಳನ್ನು ಅನುಭವಿಸಿ ಕಾಂಗ್ರೆಸ್ ಪಕ್ಷಕ್ಕೆ ಹೋದ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯರನ್ನು ಕೆಳಗಿಳಿಸಿ, ಡಿಕೆ ಶಿವಕುಮಾರ್ ಅವರನ್ನು ಕಡೆಗಣಿಸಿ, ಜಿ ಪರಮೇಶ್ವರ್ ಮತ್ತು ಎಂಬಿ ಪಾಟೀಲ್ ಮೊದಲಾದವರಿಗೆ ಕೊಕ್ ನೀಡಿ ಮುಖ್ಯಮಂತ್ರಿಗಳನ್ನಾಗಗಿ ಮಾಡುವ ಸಾದ್ಯತೆಯೂ ಇದೆ, ಹಾಗಾದಲ್ಲಿ ತಾನು ತುಂಬಾ ಸಂತೋಷಪಡುವುದಾಗಿ ರವಿ ಕುಹುಕವಾಡಿದರು. ರವಿ ಮಾತಿನಲ್ಲಿ ಹತಾಷೆ ಸ್ಪಷ್ಟವಾಗಿ ಕಾಣುತ್ತಿದೆ. ಶೆಟ್ಟರ್ ಈಗ ಕಾಂಗ್ರೆಸ್ ಪಕ್ಷದ ನಾಯಕ, ಅವರು ಎಮ್ಮೆಲ್ಸಿ ಅಗಿದ್ದಕ್ಕೆ ಹಿರಿಹಿರಿಯಾದರೂ ಹಿಗ್ಗಲಿ, ಅಥವಾ ಕುಗ್ಗಲಿ ಇಲ್ಲವೇ ಮುಖ್ಯಮಂತ್ರಿಯಾಗಲಿ ಅದನ್ನು ಕಟ್ಟಿಕೊಂಡು ಇವರಿಗೇನಾಗಬೇಕಿದೆ ಅಂತ ಕನ್ನಡಿಗರು ಆಡಿಕೊಳ್ಳದಿರಲಾರರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

