ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ರಿಷಬ್ ಶೆಟ್ಟಿ ಏಕೆ ಬರಲಿಲ್ಲ? ಕೊನೆಗೂ ಸಿಕ್ತು ಉತ್ತರ

Updated on: May 16, 2025 | 10:38 AM

ರಾಕೇಶ್ ಪೂಜಾರಿ ಅವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರ ಬಗ್ಗೆ ಆಪ್ತ ಸೂರಜ್ ಅವರು ಮಾತನಾಡಿದ್ದಾರೆ. ಸೂರಜ್ ಅವರು ರಿಷಬ್ ಶೆಟ್ಟಿ ಏಕೆ ಬರಲಿಲ್ಲ ಎಂಬುದನ್ನು ವಿವರಿಸಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಅವರು ಹೇಳಿದ್ದರ ವಿವರ ಇಲ್ಲಿದೆ ನೋಡಿ.

‘ಕಾಂತಾರ: ಚಾಪ್ಟರ್ 1’ (Kantar Chapter 1) ಸಿನಿಮಾದಲ್ಲಿ ರಾಕೇಶ್ ಪೂಜಾರಿ ನಟಿಸಿದ್ದಾರೆ. ರಾಕೇಶ್ ನಿಧನ ಹೊಂದಿದರೂ ಅವರನ್ನು ನೋಡಲು ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಬಂದಿಲ್ಲ ಎಂಬ ಬಗ್ಗೆ ಚರ್ಚೆಗಳು ನಡೆದವು. ಈ ಬಗ್ಗೆ ರಾಕೇಶ್ ಆಪ್ತ ಸೂರಜ್ ಮಾತನಾಡಿದ್ದರೆ. ‘ಅವರ ಪಾಯಿಂಟ್ ಆಫ್ ವೀವ್ ಏನಿದೆ ಗೊತ್ತಿಲ್ಲ. ಹೊರಗಿನಿಂದ ಕಲಾವಿದರನ್ನು ಕರೆಸಿದಾಗ ಆ ದಿನದ ಶೂಟ್ ಮಾಡಲೇಬೇಕಿರುತ್ತದೆ. ಅವರು ಬಂದೇ ಬರುತ್ತಾರೆ ಎನ್ನುವ ಧೈರ್ಯ ನಮಗೆ ಇದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.