Video: ತಾನು ಕೂಡಿಟ್ಟ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ ಬಾಲಕ
ತಾನು ಸೈಕಲ್ ಕೊಳ್ಳಬೇಕು, ಬಟ್ಟೆ ತೆಗೆದುಕೊಳ್ಳಬೇಕು, ಪುಸ್ತಕಗಳನ್ನು ಕೊಳ್ಳಬೇಕೆಂಬ ಆಸೆಯಿಂದ ಕೂಡಿಟ್ಟಿದ್ದ ಹಣವನ್ನು 8 ವರ್ಷದ ಬಾಲಕ ಭಾರತೀಯ ಸೇನೆಗೆ ದಾನ ಮಾಡಿ ಎಲ್ಲರ ಹೃದಯ ಗೆದ್ದಿದ್ದಾನೆ. ತಮಿಳುನಾಡಿನ ಕರೂರ್ ಜಿಲ್ಲೆಯ 8 ವರ್ಷದ ಸಾಯಿ ಧನ್ವಿಶ್ ತನ್ನ ಎಲ್ಲಾ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ್ದಾನೆ.
ಚೆನ್ನೈ, ಮೇ 16: ತಾನು ಸೈಕಲ್ ಕೊಳ್ಳಬೇಕು, ಬಟ್ಟೆ ತೆಗೆದುಕೊಳ್ಳಬೇಕು, ಪುಸ್ತಕಗಳನ್ನು ಕೊಳ್ಳಬೇಕೆಂಬ ಹೀಗೆ ನಾನಾ ಆಸೆಗಳಿಂದ ಕೂಡಿಟ್ಟಿದ್ದ ಹಣವನ್ನು 8 ವರ್ಷದ ಬಾಲಕ ಭಾರತೀಯ ಸೇನೆಗೆ ದಾನ ಮಾಡಿ ಎಲ್ಲರ ಹೃದಯ ಗೆದ್ದಿದ್ದಾನೆ. ತಮಿಳುನಾಡಿನ ಕರೂರ್ ಜಿಲ್ಲೆಯ 8 ವರ್ಷದ ಸಾಯಿ ಧನ್ವಿಶ್ ತನ್ನ ಎಲ್ಲಾ ಹಣವನ್ನು ಭಾರತೀಯ ಸೇನೆಗೆ ದಾನ ಮಾಡಿದ್ದಾನೆ.
2ನೇ ತರಗತಿಯ ವಿದ್ಯಾರ್ಥಿ ಧನ್ವಿಶ್ ತನ್ನ ಹೆತ್ತವರೊಂದಿಗೆ ಕರೂರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತನ್ನ ಉಳಿತಾಯದ ಹಣದಿಂದ ತುಂಬಿದ ಹಳದಿ ಬಣ್ಣದ ನೀರಿನ ಟ್ಯಾಂಕ್ ಆಕಾರದ ಪೆಟ್ಟಿಗೆಯನ್ನು ಹಸ್ತಾಂತರಿಸಿದ್ದಾನೆ. ವರ್ಷವಿಡೀ ಸಂಬಂಧಿಕರಿಂದಲೂ ಹಣವನ್ನು ಸಂಗ್ರಹಿಸಿದ್ದೆ ಎಂದಿದ್ದಾನೆ. ನಾನು ಯಾವಾಗಲೂ ಅಗತ್ಯವಿರುವವರಿಗೆ ಸಹಾಯ ಮಾಡುತ್ತೇನೆ ಎಂದ ಆತ ವಯನಾಡ್ ಭೂಕುಸಿತ ಸಂತ್ರಸ್ತರಿಗೂ ಸಹಾಯ ಮಾಡಿದ್ದಾಗಿ ಪೋಷಕರು ಹೇಳಿದ್ದಾರೆ.
ವೆಲ್ಲಿಯಾನೈನಲ್ಲಿ ಮೀನಿನ ಅಂಗಡಿ ನಡೆಸುತ್ತಿರುವ ಸತೀಶ್ ಕುಮಾರ್ ಮತ್ತು ಪವಿತ್ರಾ ದಂಪತಿಗಳಿಗೆ ಜನಿಸಿದ ಧನ್ವಿಶ್ಗೆ ಜಿತೇಶ್ ಎಂಬ 4 ವರ್ಷದ ತಮ್ಮನಿದ್ದಾನೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಸಾವನ್ನಪ್ಪಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ