Laxman Vs Simha: ಡಿಕೆ ಶಿವಕುಮಾರ್ ಜೈಲಿಗೆ ಹೋದಾಗ ಪ್ರತಾಪ್ ಸಿಂಹರ ಪ್ರೀತಿ ಅಭಿಮಾನ ಎಲ್ಲ ಅಡಗಿತ್ತು? ಎಂ ಲಕ್ಷ್ಮಣ್, ಕಾಂಗ್ರೆಸ್ ವಕ್ತಾರ
ಪ್ರತಾಪ್ ಸಿಂಹ ಮಡಕೇರಿಯ ಒಂದು ಕಂಪನಿಯಲ್ಲಿ ರೂ. 50-60 ಕೋಟಿ ಹೂಡಿದ್ದಾರೆ, ಆ ಹಣ ಅವರಲ್ಲಿ ಎಲ್ಲಿಂದ ಬಂತು, ಈ ಬಗ್ಗೆ ತಾನು ಐಟಿ ಮತ್ತು ಈಡಿಗಳಿಗೆ ಪತ್ರ ಬರೆಯುವುದಾಗಿ ಕಾಂಗ್ರೆಸ್ ವಕ್ತಾರ ಹೇಳಿದರು.
ಮೈಸೂರು: ಇದು ಮೈಸೂರಲ್ಲಿ ರುಟೀನ್ ಆಗಿಬಿಟ್ಟಿದೆ ಮಾರಾಯ್ರೇ. ಸಂಸದ ಪ್ರತಾಪ್ ಸಿಂಹ (Pratap Simha) ಸುದ್ದಿಗೋಷ್ಟಿಯೊಂದನ್ನು ನಡೆಸಿ ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆಗಳನ್ನು ಮಾಡಿದ ಸ್ವಲ್ಪ ಸಮಯದ ಬಳಿಕ ಕೆಪಿಸಿಸಿ ವಕ್ತಾರ ಎಮ್ ಲಕ್ಷ್ಮಣ್ (M Laxman) ಪತ್ರಿಕಾ ಗೋಷ್ಟಿ ನಡೆಸಿ ಸಂಸದರ ಮುಂದೆ ಹಲವಾರು ಪ್ರಶ್ನೆಗಳನ್ನಿಟ್ಟು ದಯವಿಟ್ಟು ಉತ್ತರಿಸಿ ಅನ್ನುತ್ತಾರೆ. ನಿನ್ನೆ ಪ್ರತಾಪ್ ಸಿಂಹ ಅನ್ನಭಾಗ್ಯ ಯೋಜನೆ (Anna Bhagya scheme) ಬಗ್ಗೆ ಹಲವು ಕಾಮೆಂಟ್ ಮಾಡಿದ್ದರು. ಇಂದು ಲಕ್ಷ್ಮಣ್ ಅವುಗಳಗೆ ಉತ್ತರ ನೀಡುತ್ತಾ ಪ್ರತಾಪ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಕೆ ಶಿವಕುಮಾರ್ ಬಗ್ಗೆ ಸಂಸದರು ಯಾಕೆ ಪ್ರೀತಿ, ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ ಅಂತ ಅರ್ಥಮಾಡಿಕೊಳ್ಳದಷ್ಟು ಮೂರ್ಖರೇನಲ್ಲ ಕಾಂಗ್ರೆಸ್ ನಾಯಕರು, ಆದರೆ ಶಿವಕುಮಾರ್ ರನ್ನು ಸುಳ್ಳು ಕೇಸ್ ಗಳಲ್ಲಿ ಸಿಕ್ಕಿಸಿ ಒಂದು ತಿಂಗಳು ಜೈಲಿಗೆ ಹಾಕಿದಾಗ ಎಲ್ಲಿ ಹೋಗಿತ್ತು ಸಂಸದರ ಪ್ರೀತಿ ಅಭಿಮಾನ ಎಂದು ಲಕ್ಷ್ಮಣ್ ಕೇಳಿದರು. ಸಿದ್ದರಾಮಯ್ಯ ಎಷ್ಟು ದಿನಗಳವರೆಗೆ ಮುಖ್ಯಮಂತ್ರಿಯಾಗಿರುತ್ತಾರೆ ಅನ್ನೋದು ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ವಿಚಾರ, ಸಂಸದರು ಯಾಕೆ ಅದರಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಲಕ್ಷ್ಮಣ್ ಕೇಳಿದರು. ಪ್ರತಾಪ್ ಸಿಂಹ ಮಡಕೇರಿಯ ಒಂದು ಕಂಪನಿಯಲ್ಲಿ ರೂ. 50-60 ಕೋಟಿ ಹೂಡಿದ್ದಾರೆ, ಆ ಹಣ ಅವರಲ್ಲಿ ಎಲ್ಲಿಂದ ಬಂತು, ಈ ಬಗ್ಗೆ ತಾನು ಐಟಿ ಮತ್ತು ಈಡಿಗಳಿಗೆ ಪತ್ರ ಬರೆಯುವುದಾಗಿ ಕಾಂಗ್ರೆಸ್ ವಕ್ತಾರ ಹೇಳಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ