ಚಾಮರಾಜಪೇಟೆಯ ಬೋರ್ ವೆಲ್ ನೀರು ಗಿಡಮರಗಳಿಗೆ ಹಾಕಲೂ ಯೋಗ್ಯವಲ್ಲ: ಸ್ಥಳೀಯ ನಿವಾಸಿಗಳು

ಅರುಣ್​ ಕುಮಾರ್​ ಬೆಳ್ಳಿ

Updated on: Apr 07, 2025 | 1:17 PM

ಚಾಮರಾಜಪೇಟೆಯಲ್ಲಿ ಒಂದು ಟ್ಯಾಂಕರ್ ನೀರಿನ ಬೆಲೆ ರೂ.1000 ಅಂತೆ, ನರಸಿಂಹ ಹೆಸರಿನ ನಿವಾಸಿಯವರ ಮನೆಗೆ ಪ್ರತಿದಿನ ಒಂದು ಟ್ಯಾಂಕರ್ ನೀರು ಬೇಕಾಗುತ್ತದೆ, ಅಂದರೆ ತಿಂಗಳಿಗೆ ಅವರು ₹ 30,000 ಕೇವಲ ನೀರಿಗಾಗಿ ಖರ್ಚು ಮಾಡಬೇಕು. ಬೋರ್ ವೇಲ್ ನೀರನ್ನು ಸ್ನಾನಕ್ಕೇನಾದರೂ ಬಳಸಿದರೆ, ಚರ್ಮರೋಗಗಳು ಅಡರುತ್ತವೆ. ನೀರಲ್ಲಿ ಕೈ ತೊಳೆದರೂ ಬೇರೆ ನೀರಲ್ಲಿ ಮತ್ತೊಮ್ಮೆ ತೊಳೆಯಲೇಬೇಕು ಎಂದು ಮತ್ತೊಬ್ಬ ನಿವಾಸಿ ಹೇಳುತ್ತಾರೆ.

ಬೆಂಗಳೂರು, ಏಪ್ರಿಲ್ 7: ಮನೆಮುಂದಿನ ಅಥವಾ ಹಿತ್ತಲಿನ ಗಿಡಮರಗಳಿಗೆ ಹಾಕಲು ಯೋಗ್ಯವಲ್ಲದ ನೀರು ಮಾನವ ಬಳಕೆಗೆ ಯೋಗ್ಯವೇ ಎಂದು ನಗರದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿ ನಿವಾಸಿಗಳು (residents of Raghavendra colony) ಸ್ಥಳೀಯ ಸಂಸ್ಥೆಗಳನ್ನು ಮತ್ತು ಸರ್ಕಾರದ ಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಇಲ್ಲಿನ ಬೋರ್​​ವೆಲ್ ಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಪೆಟ್ರೋಲ್ ಮಿಶ್ರಿತ ನೀರು ಬರುತ್ತಿದೆ ಮತ್ತು ಅದು ಯಾವುದೇ ರೀತಿಯ ಬಳಕೆಗೆ ಯೋಗ್ಯವಲ್ಲ ಎಂದು ಸ್ಥಳೀಯರು ತಮ್ಮ ಅಸಮಾಧಾನ ಮತ್ತು ಅಕ್ರೋಶವನ್ನು ಹೊರಹಾಕುತ್ತಿದ್ದಾರೆ. ಪರಿಸರ ಮಂಡಳಿ, ಜಲಮಂಡಳಿ ಮತ್ತು ಬಿಬಿಎಂಪಿಯವರು ಟಿವಿ ಚ್ಯಾನೆಲ್​​ಗಳಲ್ಲಿ ವರದಿ ಬಿತ್ತರವಾದಾಗ ಒಂದೆರಡು ಬಾರಿ ಬಂದು ಹೋಗುತ್ತಾರಂತೆ, ಅಷ್ಟೇ.

ಇದನ್ನೂ ಓದಿ:  ಕೊಳವೆಬಾವಿ ಯೋಜನೆಯಲ್ಲಿ ಭಾರೀ ಅಕ್ರಮ, ಬಿಬಿಎಂಪಿ ಮುಖ್ಯ ಇಂಜಿನೀಯರ್ ಕಚೇರಿ ಮೇಲೆ ಈಡಿ ದಾಳಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.