ಧರ್ಮಸ್ಥಳ ಪ್ರಕರಣದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಗೃಹ ಸಚಿವ ಪರಮೇಶ್ವರ್

Updated on: Aug 17, 2025 | 1:20 PM

ಧರ್ಮಸ್ಥಳ ಶವ ಶೋಧ ಪ್ರಕರಣ ಕ್ಲೈಮ್ಯಾಕ್ಸ್​ ಹಂತಕ್ಕ ಬಂದಿದೆ. ನಿನ್ನೆ ಶವ ಶೋಧಕ್ಕೆ ಬ್ರೇಕ್‌ ಹಾಕಿದ್ದ ಎಸ್‌ಐಟಿ, ಠಾಣೆಗೆ ದೂರುದಾರ ಮಾಸ್ಕ್‌ಮ್ಯಾನ್‌ನನ್ನ ಕರೆಸಿಕೊಂಡು ಕೋರ್ಟ್​​ ​ಗೆ ತಂದಿದ್ದ ಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆದ್ರೆ ಎಸ್​ಐಟಿ ತನಿಖೆಯಲ್ಲಿ ಏನೇನು ಆಗಿದೆ ಎನ್ನುವುದೇ ನಿಗೂಢವಾಗಿದೆ. ಹೀಗಾಗಿ ಎಸ್​ಐಟಿ ತನಿಖೆಯ ಪ್ರಾಥಮಿಕ ಮಾಹಿತಿ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಇದರ ಬೆನ್ನಲ್ಲೇ ಇದುವರೆಗೂ ಧರ್ಮಸ್ಥಳ ಶವ ಶೋಧದ ಎಸ್​ಐಟಿ ತನಿಖೆಯ ವರದಿ ಬಗ್ಗೆ ನಾಳೆ(ಆಗಸ್ಟ್ 18) ಸದನದಲ್ಲಿ ವಿವರಿಸಲು ಗೃಹ ಸಚಿವ ಡಾ ಜಿ ಪರಮೇಶ್ವರ್ ಮುಂದಾಗಿದೆ

ಚಾಮರಾನಗರ, (ಆಗಸ್ಟ್ 17): ಧರ್ಮಸ್ಥಳ ಶವ ಶೋಧ ಪ್ರಕರಣ ಕ್ಲೈಮ್ಯಾಕ್ಸ್​ ಹಂತಕ್ಕ ಬಂದಿದೆ. ನಿನ್ನೆ ಶವ ಶೋಧಕ್ಕೆ ಬ್ರೇಕ್‌ ಹಾಕಿದ್ದ ಎಸ್‌ಐಟಿ, ಠಾಣೆಗೆ ದೂರುದಾರ ಮಾಸ್ಕ್‌ಮ್ಯಾನ್‌ನನ್ನ ಕರೆಸಿಕೊಂಡು ಕೋರ್ಟ್​​ ​ಗೆ ತಂದಿದ್ದ ಬುರುಡೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಆದ್ರೆ ಎಸ್​ಐಟಿ ತನಿಖೆಯಲ್ಲಿ ಏನೇನು ಆಗಿದೆ ಎನ್ನುವುದೇ ನಿಗೂಢವಾಗಿದೆ. ಹೀಗಾಗಿ ಎಸ್​ಐಟಿ ತನಿಖೆಯ ಪ್ರಾಥಮಿಕ ಮಾಹಿತಿ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ. ಇದರ ಬೆನ್ನಲ್ಲೇ ಇದುವರೆಗೂ ಧರ್ಮಸ್ಥಳ ಶವ ಶೋಧದ ಎಸ್​ಐಟಿ ತನಿಖೆಯ ವರದಿ ಬಗ್ಗೆ ನಾಳೆ(ಆಗಸ್ಟ್ 18) ಸದನದಲ್ಲಿ ವಿವರಿಸಲು ಗೃಹ ಸಚಿವ ಡಾ ಜಿ ಪರಮೇಶ್ವರ್ ಮುಂದಾಗಿದೆ.

ಈ ಸಂಬಂಧ ಚಾಮರಾಜನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಾಳೆ ಸದನದಲ್ಲಿ ಸಂಪೂರ್ಣ ಉತ್ತರ ಕೊಡಲು ಪ್ರಯತ್ನ ಮಾಡುತ್ತೇನೆ. ಯಾರೂ ಕೂಡ ಈ ಪ್ರಕರಣದಲ್ಲಿ ರಾಜಕಾರಣ ಮಾಡಬಾರದು. ಇದು ನ್ಯಾಯ ಮತ್ತು ಕಾನೂನಿಗೆ ಸಂಬಂಧಪಟ್ಟಂತಹ ವಿಚಾರವಾಗಿದೆ. ಯಾರೇ ದೂರು ಕೊಟ್ಟರೂ ಎಫ್​ಐಆರ್ ದಾಖಲಿಸಿ ತನಿಖೆ ಮಾಡೋದು ಸಹಜ. ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡಬಾರದು. ಎಸ್​​ಐಟಿ ತನಿಖೆ ನಡೆಯುತ್ತಿದೆ, ಅದು ಅಂತಿಮವಾಗಲಿ. ಮಧ್ಯಂತರ ವರದಿ ಬಗ್ಗೆ ಎಸ್​ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ದೂರುದಾರ ಹೇಳಿದಂತೆ ಕೂರುವುದಕ್ಕೆ ಆಗುವುದಿಲ್ಲ. ಈ ಬಗ್ಗೆ ಎಸ್​ಐಟಿ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.