ನಾನು ಜೈಲಿಗೆ ಹೋದರೆ ಸಚಿವ ಅಶ್ವಥ್ ನಾರಾಯಣರನ್ನು ಅಲ್ಲೇ ಭೇಟಿಯಾಗುತ್ತೇನೆ: ಡಿಕೆ ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 21, 2022 | 2:58 PM

ತಮ್ಮನ್ನು ಜೈಲಿಗೆ ಕಳಿಸಲು ಏನೆಲ್ಲ ಹುನ್ನಾರ ನಡೆದಿದೆ ಅಂತ ಚೆನ್ನಾಗಿ ಗೊತ್ತಿದೆ, ತಾವು ಜೈಲಿಗೆ ಹೋದರೆ ಅಶ್ವಥ್ ನಾರಾಯಣ ಅವರನ್ನು ಅಲ್ಲೇ ಭೇಟಿಯಾಗುವುದಾಗಿ ಶಿವಕುಮಾರ ಹೇಳಿದರು.

ರಾಮನಗರ: ಮತದಾರರ ಡಾಟಾ ಕಳುವು (voter data theft) ಪ್ರಕರಣದಲ್ಲಿ ಬಿಜೆಪಿ ಸರ್ಕಾರ ಹಣ್ಣು ತಿಂದವರನ್ನು ಬಿಟ್ಟು ಸಿಪ್ಪೆ ತಿಂದವರನ್ನು ಬಂಧಿಸಿದ್ದಾರೆ. ನೋಟುಗಳನ್ನು ಪ್ರಿಂಟ್ ಮಾಡುವಷ್ಟೇ ದೊಡ್ಡ ಅಪರಾಧ ಇದಾಗಿದ್ದರೂ ಹಗರಣದಲ್ಲಿ ಭಾಗಿಯಾಗಿರುವ ಹಿರಿಯ ಅಧಿಕಾರಿಗಳನ್ನು ಬಂಧಿಸುವ ಪ್ರಯತ್ನ ನಡೆದಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ರಾಮನಗರದಲ್ಲಿ ಇಂದು ಹೇಳಿದರು. ಸಚಿವ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರು ಶಿವಕುಮಾರ ಮತ್ತೆ ಜೈಲಿಗೆ ಹೋಗುತ್ತಾರೆ ಎಂದು ಹೇಳಿರುವುದನ್ನು ಅವರ ಗಮನಕ್ಕೆ ತಂದಾಗ, ತಮ್ಮನ್ನು ಜೈಲಿಗೆ ಕಳಿಸಲು ಏನೆಲ್ಲ ಹುನ್ನಾರ ನಡೆದಿದೆ ಅಂತ ಚೆನ್ನಾಗಿ ಗೊತ್ತಿದೆ, ತಾವು ಜೈಲಿಗೆ ಹೋದರೆ ಅಶ್ವಥ್ ನಾರಾಯಣ ಅವರನ್ನು ಅಲ್ಲೇ ಭೇಟಿಯಾಗುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ