ಚಾಮರಾಜನಗರ: ಹನೂರಿನ ಸಿದ್ದಪ್ಪಾಜಿ ಜಾತ್ರೆಯಲ್ಲಿ ಕೊತಕೊತ ಕುದಿಯುತ್ತಿದ್ದ ಎಣ್ಣೆ ಬಾಂಡಲಿಯಲ್ಲಿ ಬರಿಗೈ ಅದ್ದಿದ ಅರ್ಚಕ
ಅರ್ಚಕರಲ್ಲಿ ಒಬ್ಬರು ಕುದಿಯುವ ಎಣ್ಣೆಯಲ್ಲಿ ಬರಿಗೈ ಹಾಕಿ ಕಜ್ಜಾಯ ಹೊರಗೆಸೆಯುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಚಾಮರಾಜನಗರ: ಇದೊಂದು ವಿಸ್ಮಯಕಾರಿ ಸಂಗತಿ ಮಾರಾಯ್ರೇ. ಚಾಮರಾಜನಗರ (Chamarajanagar) ಜಿಲ್ಲೆ ಹನೂರು ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ಸಿದ್ದಪ್ಪಾಜಿ ಜಾತ್ರೆಯಲ್ಲಿ (Siddappaji Fare) ಕಾಣಿಸಿದ ದೃಶ್ಯವಿದು. ಅಗ್ನಕುಂಡದ ಮೇಲೆ ಒಂದು ಕಡಾಯಿಯಲ್ಲಿ ಎಣ್ಣೆ ಕೊತಕೊತ ಕುದಿಯುತ್ತಿದೆ ಮತ್ತು ಅದರ ಸುತ್ತ ಇಬ್ಬರು ಅರ್ಚಕರು (priests) ಮೈಮೇಲೆ ದೇವರು ಬಂದವರ ಹಾಗೆ ಕುಣಿಯುತ್ತಿದ್ದಾರೆ. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದಾರೆ. ಅರ್ಚಕರಲ್ಲಿ ಒಬ್ಬರು ಕುದಿಯುವ ಎಣ್ಣೆಯಲ್ಲಿ ಬರಿಗೈ ಹಾಕಿ ಕಜ್ಜಾಯ ಹೊರಗೆಸೆಯುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos