ಸಂಸದ ಪ್ರತಾಪ್ ಸಿಂಹ ಕಾಲುಮುಟ್ಟಿ ನಮಸ್ಕರಿಸಿದರೂ ಕ್ಯಾರೇ ಅನ್ನದ ಶಾಸಕ ಎಸ್ ಎ ರಾಮದಾಸ್!
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಾಪ್ ಸಿಂಹ ಅವರು ರಾಮದಾಸರ ಕಾಲುಮುಟ್ಟಿ ನಮಸ್ಕರಸಿದರೂ ಶಾಸಕರು ಮಾತ್ರ ಮುಖ ಗಂಟಿಕ್ಕಿಕೊಂಡೇ ಇದ್ದರು. ಈ ವಿಡಿಯೋ ವೈರಲ್ ಆಗಿದೆ.
ಮೈಸೂರು: ಬಿಜೆಪಿ ನಾಯಕರಾಗಿರುವ ಶಾಸಕ ಎಸ್ ಎ ರಾಮದಾಸ (SA Ramadas) ಮತ್ತು ಸಂಸದ ಪ್ರತಾಪ್ ಸಿಂಹ (Pratap Simha) ನಡುವಿನ ಮುಸುಕಿನ ಗುದ್ದಾಟ, ಟ್ವೀಟ್ ಕಲಹ, ವಿರಸ ಮುಗಿಯುವ ಲಕ್ಷಣಗಳಿಲ್ಲ. ಯಾಕೆ ಅಂತ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಬ್ರಾಹ್ಮಣರ (Brahmins) ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಆಪ್ತ ಮಲ್ಲೇಶ್ ಅಕ್ಷೇಪಾರ್ಹ ಪದ ಬಳಕೆ ವಿರೋಧಿಸಿ ಬ್ರಾಹ್ಮಣರ ಒಕ್ಕೂಟ ಇಂದು ಮೈಸೂರು ನಗರದಲ್ಲಿ ಗನ್ ಹೌಸ್ ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರಾಮದಾಸ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಾಪ್ ಸಿಂಹ ಅವರು ರಾಮದಾಸರ ಕಾಲುಮುಟ್ಟಿ ನಮಸ್ಕರಸಿದರೂ ಶಾಸಕರು ಮಾತ್ರ ಮುಖ ಗಂಟಿಕ್ಕಿಕೊಂಡೇ ಇದ್ದರು. ಈ ವಿಡಿಯೋ ವೈರಲ್ ಆಗಿದೆ.
Latest Videos