ಮಂಗಳೂರು: ಬಾಂಬ್ ಸ್ಫೋಟ ಘಟನೆಯಲ್ಲಿ ಗಾಯಗೊಂಡು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನ ಗುರುತು ಪತ್ತೆ
ಕಂಕನಾಡಿಯ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಖ್ ನನ್ನು ಅವನ ಚಿಕ್ಕಮ್ಮ ಮತ್ತು ಸಹೋದರಿ ಗುರುತು ಹಿಡಿದಿದ್ದಾರೆ.
ಮಂಗಳೂರು: ನಗರದ ಆಟೋರಿಕ್ಷಾವೊಂದರಲ್ಲಿ ರವಿವಾರ ನಡೆದ ಬಾಂಬ್ ಸ್ಫೋಟ (bomb blast) ಘಟನೆಯಲ್ಲಿ ಗಾಯಗೊಂಡಿರುವ ಯುವಕ ಶಾರಿಖ್ (Shariq) ಅನ್ನೋದು ಖಚಿತವಾಗಿದೆ. ಕಂಕನಾಡಿಯ (Kankanadi) ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಖ್ ನನ್ನು ಅವನ ಚಿಕ್ಕಮ್ಮ ಮತ್ತು ಸಹೋದರಿ ಗುರುತು ಹಿಡಿದಿದ್ದಾರೆ. ಪೊಲೀಸರು ಅವನ ಕುಟುಂಬಸ್ಥರನ್ನು ಆಸ್ಪತ್ರೆಗೆ ಕರೆತರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
Published on: Nov 21, 2022 11:40 AM
Latest Videos