Ashika Ranganath: ‘ಆ ಹುಡುಗಿ ಅಂಥವಳಲ್ಲ’: ಆಶಿಕಾ ವೈರಲ್ ವಿಡಿಯೋ ಬಗ್ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಬಹಿರಂಗ ಹೇಳಿಕೆ
Raymo pre-release event: ‘ರೇಮೊ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ಗೆ ರವಿಚಂದ್ರನ್ ಅತಿಥಿಯಾಗಿ ಬಂದಿದ್ದರು. ಈ ವೇದಿಕೆಯಲ್ಲಿ ಆಶಿಕಾ ರಂಗನಾಥ್ ಅವರ ವೈರಲ್ ವಿಡಿಯೋ ಬಗ್ಗೆ ಕ್ರೇಜಿ ಸ್ಟಾರ್ ಪ್ರಸ್ತಾಪಿಸಿದರು.
ಇತ್ತೀಚೆಗೆ ನಟಿ ಆಶಿಕಾ ರಂಗನಾಥ್ (Ashika Ranganath) ಅವರ ಒಂದು ವಿಡಿಯೋ ವೈರಲ್ ಆಗಿತ್ತು. ಶೂಟಿಂಗ್ ವೇಳೆ ಅವರು ಕುಡಿದು ರಂಪಾಟ ಮಾಡಿದ್ದಾರೆ ಎಂದೆಲ್ಲ ಕೆಲವರು ಗಾಸಿಪ್ ಹಬ್ಬಿಸಿದರು. ಆ ಬಗ್ಗೆ ಈಗ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಮಾತನಾಡಿದ್ದಾರೆ. ಭಾನುವಾರ (ನ.20) ‘ರೇಮೊ’ (Raymo Movie) ಸಿನಿಮಾದ ಪ್ರೀ-ರಿಲೀಸ್ ಇವೆಂಟ್ಗೆ ಬಂದಿದ್ದ ರವಿಚಂದ್ರನ್ ಅವರು ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು. ‘ಆಶಿಕಾ ವಿಡಿಯೋವನ್ನು ನನ್ನ ಹೆಂಡತಿ ನನಗೆ ತೋರಿಸಿದಳು. ಆ ಹುಡುಗಿ ಅಂಥವಳಲ್ಲ ಅಂತ ನಾನು ಹೇಳಿದೆ. ಆ ನಂಬಿಕೆ ನನಗಿದೆ’ ಎಂದು ರವಿಚಂದ್ರನ್ (Ravichandran) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos