Ashika Ranganath: ಕುಡಿದು ಕಿರಿಕ್ ಮಾಡಿಕೊಂಡ್ರಾ ಆಶಿಕಾ ರಂಗನಾಥ್? ವಿಡಿಯೋ ವೈರಲ್
Ashika Ranganath Viral Video: ಆಶಿಕಾ ರಂಗನಾಥ್ ಅವರು ಬಾಟಲಿ ಹಿಡಿದು ತೂರಾಡುತ್ತಿರುವ ದೃಶ್ಯ ಇದರಲ್ಲಿದೆ. ಇದು ‘ರೇಮೊ’ ಶೂಟಿಂಗ್ ಸೆಟ್ನಲ್ಲಿ ಸೆರೆಯಾದ ವಿಡಿಯೋ ಎನ್ನಲಾಗಿದ್ದು, ಸಖತ್ ವೈರಲ್ ಆಗಿದೆ.
ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಸಖತ್ ಸೌಮ್ಯ ಸ್ವಭಾವದವರು. ಅವರು ಕುಡಿದು ರಂಪಾಟ ಮಾಡ್ತಾರೆ ಅಂದರೆ ನಂಬೋಕೆ ಸಾಧ್ಯವೇ? ‘ರೇಮೊ’ ಚಿತ್ರದ (Raymo Movie) ಶೂಟಿಂಗ್ ಸಮಯದ ಒಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಆಶಿಕಾ ರಂಗನಾಥ್ ಅವರು ಬಾಟಲಿ ಹಿಡಿದು ತೂರಾಡುತ್ತಿರುವ ದೃಶ್ಯ ಇದೆ. ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿಯಲು ಬಂದವರಿಗೆ ಮಧ್ಯ ಬೆರಳು ತೋರಿಸಿದ್ದಾರೆ ಆಶಿಕಾ. ಇದು ಸಿನಿಮಾದ ದೃಶ್ಯವೋ ಅಥವಾ ನಿಜವಾಗಿ ಕಿರಿಕ್ ನಡೆಯಿತೋ ಎಂಬುದು ಗೊತ್ತಾಗುವುದಕ್ಕೂ ಮುನ್ನವೇ ಈ ವಿಡಿಯೋ (Ashika Ranganath Viral Video) ವೈರಲ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 18, 2022 11:17 AM
Latest Videos