ಬಿಎಮ್ ಎಸ್ ಶಿಕ್ಷಣ ಟ್ರಸ್ಟ್ ಸರ್ಕಾರ ವಶಕ್ಕೆ ಪಡೆದು ಸಚಿವರು ರಾಜೀನಾಮೆ ಸಲ್ಲಿಸದ ಹೊರತು ನಮ್ಮ ಧರಣಿ ನಿಲ್ಲದು: ಕುಮಾರಸ್ವಾಮಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 23, 2022 | 2:31 PM

ನಾವು ಕೇಳಿದ ಪ್ರಶ್ನೆಗಳಿಗೆ ಸಚಿವರು ಅಸಡ್ಡೆಯ ಉತ್ತರಗಳನ್ನು ನೀಡಿದ್ದಾರೆ, ಇದು ಉದ್ಧಟತನದ ಪರಮಾವಧಿ, ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರೆಸುತ್ತೇವೆ ಎಂದು ಅವರು ಹೇಳಿದರು.

ಬೆಂಗಳೂರು:  ದಶಕಗಳಿಂದ ಸಾರ್ವಜನಿಕ ಟ್ರಸ್ಟ್ ಆಗಿರುವ ಬಿಎಮ್ ಎಸ್ ಶಿಕ್ಷಣ ಟ್ರಸ್ಟ್ ( BMS Trust) ಖಾಸಗಿಯವರಿಗೆ ಒಪ್ಪಿಸಿಕೊಟ್ಟಿರುವುದು ಅಕ್ಷಮ್ಯ, ಈ ಪ್ರಕರಣದಲ್ಲಿ ನಡೆದಿರಬಹುದಾದ ಅಕ್ರಮ ವ್ಯವಹಾರಗಳ ತನಿಖೆಯಾಗಬೇಕು, ಸರ್ಕಾರ ಟ್ರಸ್ಟನ್ನು ಪುನಃ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಮತ್ತು ಉನ್ನತ ಶಿಕ್ಷಣ ಸಚಿವ ಡಾ ಸಿಎನ್ ಅಶ್ಥಥ್ ನಾರಾಯಣ (Dr CN Ashwath Narayan) ಅವರು ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy,) ಅವರು ವಿಧಾನ ಸಭೆ ಆವರಣದಲ್ಲಿ ಸುದ್ದಿಗಾರರಿಗೆ ಹೇಳಿದರು. ನಾವು ಕೇಳಿದ ಪ್ರಶ್ನೆಗಳಿಗೆ ಸಚಿವರು ಅಸಡ್ಡೆಯ ಉತ್ತರಗಳನ್ನು ನೀಡಿದ್ದಾರೆ, ಇದು ಉದ್ಧಟತನದ ಪರಮಾವಧಿ, ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರೆಸುತ್ತೇವೆ ಎಂದು ಅವರು ಹೇಳಿದರು.