ಗೋಡ್ಸೆಯನ್ನು ಪೂಜಿಸುತ್ತಾರೆ, ಮಹಾತ್ಮ ಗಾಂಧಿಯನ್ನು ದೂರ ಇಡುತ್ತಾರೆ: ರಾಹುಲ್​ ಗಾಂಧಿ

Updated on: Dec 09, 2025 | 5:35 PM

ಚಳಿಗಾಲದ ಅಧಿವೇಶನದಲ್ಲಿ ರಾಹುಲ್ ಗಾಂಧಿ ಬಿಜೆಪಿ, RSS ವಿರುದ್ಧ ವಾಗ್ದಾಳಿ ನಡೆಸಿದರು. ಮಹಾತ್ಮ ಗಾಂಧೀಜಿಯನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದ್ದನ್ನು ಉಲ್ಲೇಖಿಸಿ, RSS ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಮತದಾನ ಸಂಸ್ಥೆಯನ್ನೂ ಹತೋಟಿಗೆ ತೆಗೆದುಕೊಳ್ಳುವ ಉದ್ದೇಶವಿದೆ ಎಂದರು. INDIA ಒಕ್ಕೂಟ ಜಾತಿ, ಧರ್ಮ, ಭಾಷೆ ತಾರತಮ್ಯವಿಲ್ಲದೆ ಎಲ್ಲರ ಸಮಾನತೆಯನ್ನು ಎತ್ತಿಹಿಡಿಯುತ್ತದೆ ಎಂದು ಪ್ರತಿಪಾದಿಸಿದರು.

ದೆಹಲಿ, ಡಿ.9: ಇಂದು ನಡೆದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್​​ ಗಾಂಧಿ (Rahul Gandhi) ಅವರು ಮಾತನಾಡಿದರು. ಈ ವೇಳೆ ಬಿಜೆಪಿ ವಿರುದ್ಧ ಗುಡುಗಿದ ಅವರು, ಮಹಾತ್ಮ ಗಾಂಧಿಯವರನ್ನು ಜನವರಿ 30, 1948 ರಂದು ಗುಂಡುಕ್ಕಿ ಕೊಂದರು, ಅದು ಕೂಡ ಆರ್​ಎಸ್​ಎಸ್​​ ಬೆಂಬಲಿತ ವ್ಯಕ್ತಿ ನಾಥೂರಾಮ್ ಗೋಡ್ಸೆ, ಆದರೆ ಇದು ನಮ್ಮ ವಿಪರ್ಯಾಸ ನೋಡಿ ಕೊಂದವರನ್ನು ಪೂಜಿಸುತ್ತಿದ್ದಾರೆ. ಬಲಿಯಾದವರನ್ನು ದೂರು ಇಡುತ್ತಿದ್ದಾರೆ. ಆರ್​ಎಸ್​ಎಸ್​ ಎಲ್ಲವನ್ನು ಖರೀದಿ ಮಾಡಿದೆ. ಇಂದು ಈ ಸಂಘಟನೆಗೆ ಎಲ್ಲಾ ಸಂಸ್ಥೆಗಳನ್ನು ವಶಪಡಿಸಿಕೊಳ್ಳಬೇಕಾಗಿದೆ. ಅದಕ್ಕಾಗಿ ಮತದಾನ ನಡೆಸುವ ಸಂಸ್ಥೆಯನ್ನು ಕೂಡ ತನ್ನ ವಶಕ್ಕೆ ತೆಗೆದುಕೊಂಡಿದೆ. ಮಹಾತ್ಮ ಗಾಂಧಿ ಹತ್ಯೆ ನಂತರ ಎಲ್ಲವನ್ನು ವಶಪಡಿಸಿಕೊಳ್ಳುವ ಯೋಚನೆ ಅವರಲ್ಲಿ ಇತ್ತು ಎಂದು ಹೇಳಿದರು. ಇನ್ನು ನಮ್ಮ ಇಂಡಿಯಾ ಒಕ್ಕೂಟದಲ್ಲಿ ಎಲ್ಲರೂ ಸಮಾನರು ಯಾರಲ್ಲೂ ತಾರತಮ್ಯ ಮಾಡಿಲ್ಲ. ಎಲ್ಲ ಜಾತಿ, ಸಮುದಾಯ, ಧರ್ಮ ಹಾಗೂ ಭಾಷೆಗಳನ್ನು ಸಮಾನವಾಗಿ ನೋಡಲಾಗುತ್ತಿದೆ. ಇದನ್ನು ಬಿಜೆಪಿಯವರಿಗೆ ಸಹಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 09, 2025 05:35 PM