Wolf Moon: ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
2026ರ ಮೊದಲ ಸೂಪರ್ ಮೂನ್ ಭಾರತದಲ್ಲಿ ಆಕಾಶವನ್ನು ಬೆಳಗಿಸಿದೆ. ಈ ದೃಶ್ಯದ ವಿಡಿಯೋ ವೈರಲ್ ಆಗಿದೆ. ಅಸ್ಸಾಂನ ಗುವಾಹಟಿಯಲ್ಲಿ ಈ ವರ್ಷದ ಮೊದಲ ಸೂಪರ್ ಮೂನ್ ಕಾಣಿಸಿದೆ. ಇದು ವುಲ್ಫ್ ಮೂನ್. 2026ರ ವರ್ಷದ ಮೊದಲ ಹುಣ್ಣಿಮೆ. ಖಗೋಳಶಾಸ್ತ್ರಜ್ಞರು ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ಏಕೆಂದರೆ ಚಂದ್ರನು ಸಾಮಾನ್ಯಕ್ಕಿಂತ ಭೂಮಿಗೆ ಹತ್ತಿರದಲ್ಲಿರುತ್ತಾನೆ. ಇದು ಸಂಭವಿಸಿದಾಗ ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಶೇ. 30ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ.
ಗುವಾಹಟಿ, ಜನವರಿ 3: ವುಲ್ಫ್ ಮೂನ್ (Wolf Moon) ಎಂದು ಕರೆಯಲ್ಪಡುವ 2026ರ ಮೊದಲ ಸೂಪರ್ ಮೂನ್ ಇಂದು ಭಾರತದ ಕೋಲ್ಕತ್ತಾ ಮತ್ತು ಲಕ್ನೋ, ಗುವಾಹಟಿ ಸೇರಿದಂತೆ ಹಲವಾರು ನಗರಗಳಲ್ಲಿ ಕಂಡುಬಂದಿತು. ಗುವಾಹಟಿಯ (Guwahati) ಆಕಾಶದಲ್ಲಿ ಕಂಡುಬಂದ ಸೂಪರ್ ಮೂನ್ ವಿಡಿಯೋ ಇಲ್ಲಿದೆ. ಈ ವೇಳೆ ಚಂದ್ರನು ಸರಾಸರಿ ಹುಣ್ಣಿಮೆಗಿಂತ ಶೇ. 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದನು. ಸೂರ್ಯಾಸ್ತದ ನಂತರ ಸ್ವಲ್ಪ ಸಮಯದ ನಂತರ ಈ ದೃಶ್ಯವು ಗೋಚರಿಸಿದೆ.
ಇದು ವುಲ್ಫ್ ಮೂನ್. 2026ರ ವರ್ಷದ ಮೊದಲ ಹುಣ್ಣಿಮೆ. ಖಗೋಳಶಾಸ್ತ್ರಜ್ಞರು ಇದನ್ನು ಸೂಪರ್ ಮೂನ್ ಎಂದು ಕರೆಯುತ್ತಾರೆ. ಏಕೆಂದರೆ ಚಂದ್ರನು ಸಾಮಾನ್ಯಕ್ಕಿಂತ ಭೂಮಿಗೆ ಹತ್ತಿರದಲ್ಲಿರುತ್ತಾನೆ. ಇದು ಸಂಭವಿಸಿದಾಗ ಚಂದ್ರನು ಸಾಮಾನ್ಯ ಹುಣ್ಣಿಮೆಗಿಂತ ಶೇ. 30ರಷ್ಟು ಪ್ರಕಾಶಮಾನವಾಗಿ ಕಾಣಿಸಿಕೊಳ್ಳುತ್ತಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ