ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!

Updated on: Sep 10, 2026 | 10:35 PM

ಮುಂಬೈ ಸಬರ್ಬನ್ ಲೋಕಲ್ ರೈಲುಗಳಲ್ಲಿನ ಭೀಕರ ಜನದಟ್ಟಣೆ ಮತ್ತು ಪ್ರಯಾಣಿಕರ ಭದ್ರತೆಯ ಕುರಿತು ಈ ಘಟನೆಯು ಮತ್ತೊಮ್ಮೆ ತೀವ್ರ ಕಳವಳಕ್ಕೆ ಕಾರಣವಾಗಿದೆ. ಸಿಗ್ನಲ್ ಬಳಿ ರೈಲು ನಿಂತಿದ್ದಾಗ ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕರು ತಳ್ಳಾಟದ ಪರಿಣಾಮವಾಗಿ ಆಯತಪ್ಪಿ ಬೀಳುವ ಅಪಾಯ ಹೆಚ್ಚಾಗಿದೆ ಎಂದು ಪ್ರಯಾಣಿಕರು ರೈಲ್ವೇ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ, ಸೆಪ್ಟೆಂಬರ್ 10: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ದಿವಾ ಮತ್ತು ಮುಂಬ್ರಾ ನಿಲ್ದಾಣಗಳ ನಡುವೆ ಸಂಚರಿಸುತ್ತಿದ್ದ ಅತಿಯಾದ ಜನದಟ್ಟಣೆಯಿದ್ದ ಲೋಕಲ್ ರೈಲಿನಿಂದ ಮಹಿಳೆಯೊಬ್ಬರು ಕೆಳಗೆ ಬಿದ್ದ ಭೀಕರ ಘಟನೆ ಇಂದು ಬೆಳಿಗ್ಗೆ ಸಂಭವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೊಂಬಿವಲಿ ಕಡೆಗೆ ತೆರಳುತ್ತಿದ್ದ ಲೋಕಲ್ ರೈಲು ಮುಂಬ್ರಾ ಮತ್ತು ದಿವಾ ನಿಲ್ದಾಣಗಳ ನಡುವಿನ ಸಿಗ್ನಲ್‌ನಲ್ಲಿ ನಿಂತಿದ್ದಾಗ ಈ ದುರಂತ ಸಂಭವಿಸಿದೆ. ರೈಲಿನಲ್ಲಿ ಅತಿಯಾದ ಪ್ರಯಾಣಿಕರ ದಟ್ಟಣೆ ಇದ್ದಿದ್ದರಿಂದ ನಿಯಂತ್ರಣ ತಪ್ಪಿ ಮಹಿಳೆ ಕೆಳಗೆ ಬಿದ್ದಿದ್ದಾರೆ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ.

ಮುಂಬೈ ಸಬರ್ಬನ್ ಲೋಕಲ್ ರೈಲುಗಳಲ್ಲಿನ ಭೀಕರ ಜನದಟ್ಟಣೆ ಮತ್ತು ಪ್ರಯಾಣಿಕರ ಭದ್ರತೆಯ ಕುರಿತು ಈ ಘಟನೆಯು ಮತ್ತೊಮ್ಮೆ ತೀವ್ರ ಕಳವಳಕ್ಕೆ ಕಾರಣವಾಗಿದೆ. ಸಿಗ್ನಲ್ ಬಳಿ ರೈಲು ನಿಂತಿದ್ದಾಗ ಬಾಗಿಲ ಬಳಿ ನಿಂತಿದ್ದ ಪ್ರಯಾಣಿಕರು ತಳ್ಳಾಟದ ಪರಿಣಾಮವಾಗಿ ಆಯತಪ್ಪಿ ಬೀಳುವ ಅಪಾಯ ಹೆಚ್ಚಾಗಿದೆ ಎಂದು ಪ್ರಯಾಣಿಕರು ರೈಲ್ವೇ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us