Video: ಸೊಂಡಿಲಿನಿಂದ ಕಣ್ಣನ್ನು ಉಜ್ಜಿಕೊಂಡ ಗಜರಾಜ, ವೈರಲ್ ಆಯ್ತು ದೃಶ್ಯ
ಆನೆಗಳ ಆಟ ತುಂಟಾಟಗಳನ್ನು ನೋಡಲು ಎರಡು ಕಣ್ಣು ಸಾಲದು. ಸೋಶಿಯಲ್ ಮೀಡಿಯಾದಲ್ಲಿ ಇಂತಹ ದೃಶ್ಯಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಆನೆಯೊಂದು ತನ್ನ ಕ್ಯೂಟ್ ನೆಸ್ ನಿಂದಲೇ ಎಲ್ಲರ ಗಮನ ಸೆಳೆದಿದೆ. ತನ್ನ ಸೊಂಡಿಲಿನಿಂದ ಕಣ್ಣು ಉಜ್ಜಿಕೊಳ್ಳುತ್ತಿರುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಆನೆಗಳು (elephants) ಏನು ಮಾಡಿದ್ರು ನೋಡೋಕೆ ಖುಷಿಯೆನಿಸುತ್ತವೆ. ಈ ಆನೆಗಳ ಆಟ ತುಂಟಾಟಗಳನ್ನು ನೋಡುವ ಖುಷಿಯೇ ಬೇರೆ. ಹೌದು ತನ್ನ ಕ್ಯೂಟ್ ಕೆಲಸದಿಂದ ಆನೆಯೊಂದು ನೆಟ್ಟಿಗರ ಹೃದಯ ಗೆದ್ದಿದೆ. ವೈರಲ್ ವಿಡಿಯೋದಲ್ಲಿ ಆನೆಯೂ ತನ್ನ ಸೊಂಡಿಲಿನಿಂದ ಕಣ್ಣನ್ನು ಉಜ್ಜಿಕೊಳ್ಳುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಸೊಂಡಿಲಿನಿಂದ ಕಣ್ಣನ್ನು ಉಜ್ಜಿಕೊಂಡ ಆನೆ
ಆಪ್2ಯೌಹ (up2youha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಆನೆಗೆ ಕಣ್ಣು ತುರಿಕೆ ಶುರುವಾಗಿದೆ. ಹೀಗಾಗಿ ಈ ಆನೆಯೂ ತನ್ನ ಸೊಂಡಿಲಿನಿಂದ ಕಣ್ಣನ್ನು ಉಜ್ಜಿಕೊಳ್ಳುತ್ತಿರುವ ಕ್ಯೂಟ್ ದೃಶ್ಯವನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ಕೆಸರಿನಲ್ಲಿ ಸಿಲುಕಿದ್ದ ಕಂದಮ್ಮನನ್ನು ರಕ್ಷಿಸಿದ ತಾಯಾನೆ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತುಂಬಾ ಕ್ಯೂಟ್ ಆಗಿದೆ ಎಂದರೆ, ಮತ್ತೊಬ್ಬರು, ಮತ್ತೆ ಮತ್ತೆ ನೋಡಬೇಕೇನಿಸುವ ದೃಶ್ಯ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಆನೆ ತುಂಬಾ ಖುಷಿಯಾಗಿರುವಂತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




