Video: ಕೆಸರಿನಲ್ಲಿ ಸಿಲುಕಿದ್ದ ಕಂದಮ್ಮನನ್ನು ರಕ್ಷಿಸಿದ ತಾಯಾನೆ
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತವೆ. ಇದೀಗ ಇಂತಹದ್ದೇ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೌದು, ಕೆಸರಿನಲ್ಲಿ ಸಿಲುಕಿ ಮೇಲಕ್ಕೆ ಏಳಲು ಕಷ್ಟ ಪಡುತ್ತಿದ್ದ ಕಂದಮ್ಮನನ್ನು ತಾಯಾನೆಯೊಂದು ರಕ್ಷಿಸಿದ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ತಾಯಿ ಪ್ರೀತಿ, ಕಾಳಜಿನೇ ಹಾಗೆ, ಮಕ್ಕಳಿಗೆ ಕಷ್ಟ ಅಂದ್ರೆ ತಾಯಿ ಹೃದಯ ಮರುಗುತ್ತದೆ. ಮಕ್ಕಳ ರಕ್ಷಣೆಗೆ ನಿಲ್ಲುತ್ತಾಳೆ. ಈ ವಿಷ್ಯದಲ್ಲಿ ಪ್ರಾಣಿಗಳು ಕೂಡ ಹೊರತಾಗಿಲ್ಲ. ಇದೀಗ ಕೆಸರಿನಲ್ಲಿ ಸಿಲುಕಿದ್ದ ಮರಿಯಾನೆಯನ್ನು ತಾಯಾನೆ (mother elephant) ರಕ್ಷಿಸಿದ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ತಾಯಿ ಪ್ರೀತಿಗೆ ಕರಗಿದ್ದಾರೆ.
ಕೆಸರಿನಲ್ಲಿ ಸಿಲುಕಿದ್ದ ಕಂದನನ್ನು ಮೇಲಕ್ಕೆತ್ತಿದ ತಾಯಾನೆ
ನೆಕ್ಸ್ಟ್ ಜೆನ್ ಎಐ ವರ್ಲ್ಡ್ (nextgenaiworld)ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಮರಿಯಾನೆಯೊಂದು ಕೆಸರಿನಲ್ಲಿ ಹುದುಗಿ ಹೋಗಿ ರಕ್ಷಣೆಗಾಗಿ ತಾಯಾನೆಯನ್ನು ಕರೆಯುತ್ತಿದೆ. ಅಪಾಯದಲ್ಲಿ ಸಿಲುಕಿದ್ದ ಕಂದಮ್ಮನನ್ನು ಕಂಡು ಓಡೋಡಿ ಬಂದಿದೆ. ತಾಯಾನೆ ಕೆಸರಿನಲ್ಲಿ ಸಿಲುಕಿದ್ದ ಮರಿಯಾನೆಯನ್ನು ಸೊಂಡಿಲಿನಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿರುವುದನ್ನು ನೀವು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ನೀರು ಕುಡಿಯಲು ಹೋಗಿ ನದಿಗೆ ಬಿದ್ದ ಮರಿಯಾನೆ, ಮುಂದೇನಾಯ್ತು ನೋಡಿ
ಈ ವಿಡಿಯೋ ಆರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ತಾಯಿ ಅಂದ್ರೇನೆ ಹಾಗೆ ಅಲ್ಲವೇ ಎಂದಿದ್ದಾರೆ. ಇನ್ನೊಬ್ಬರು, ಬುದ್ಧಿವಂತ ತಾಯಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಮಕ್ಕಳಿಗೆ ತೊಂದ್ರೆ ತಾಯಿ ತನ್ನ ಜೀವವನ್ನೇ ಕೊಡುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




