ಮಾನ್ವಿಯಿಂದ ರಾಯಚೂರಿಗೆ ಹೋಗುವಾಗ ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 26, 2022 | 11:35 AM

ಅವರನ್ನು ಅಂಬ್ಯುಲೆನ್ಸ್ ಕರೆದೊಯ್ಯುತಿರುವಾಗಲೇ ನೋವು ಜಾಸ್ತಿಯಾಗಿ ಅಂಬ್ಯುಲೆನ್ಸ್ ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ವಾಹನದಲ್ಲಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಅರೋಗ್ಯವಾಗಿದ್ದಾರೆ.

ರಾಯಚೂರು: ಇಂಥ ಪ್ರಕರಣಗಳು ಆಗಾಗ ಸಂಭವಿಸುತ್ತಿರುತ್ತವೆ ಮಾರಾಯ್ರೇ. ನೀರಮಾನ್ವಿಯ ರೇಣುಕಾ (Renuka) ಹೆಸರಿನ ಮಹಿಳೆಯೊಬ್ಬರು ಅಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಪ್ರಸಂಗ ಜರುಗಿದೆ. ರೇಣುಕಾರಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮಾನ್ವಿಯಿಂದ (Manvi) ರಾಯಚೂರಿಗೆ (Raichur) ಅವರನ್ನು ಅಂಬ್ಯುಲೆನ್ಸ್ ಕರೆದೊಯ್ಯುತಿರುವಾಗಲೇ ನೋವು ಜಾಸ್ತಿಯಾಗಿ ಅಂಬ್ಯುಲೆನ್ಸ್ ನಲ್ಲಿದ್ದ ವೈದ್ಯಕೀಯ ಸಿಬ್ಬಂದಿ ವಾಹನದಲ್ಲಿ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಅರೋಗ್ಯವಾಗಿದ್ದಾರೆ.