ಲಾಟರಿ ನಿಷೇಧ ಮಾಡಿದಾಗ ಪುನರಾರಂಭಿಸುವಂತೆ ನನ್ನ ಮೇಲೆ ಒತ್ತಡ ಹೇರಿ ಹಣದ ಆಮಿಷ ಒಡ್ಡಲಾಗಿತ್ತು: ಹೆಚ್ ಡಿ ಕುಮಾರಸ್ವಾಮಿ
ತನ್ನ ಮೇಲೆ ಒತ್ತಡ ಹೇರಿದವರು ಈಗಲೂ ಬದುಕಿದ್ದಾರೆ ಅಂತ ಹೇಳಿದರೇ ಹೊರತು ಹೆಸರು ಬಹಿರಂಗಪಡಿಸಲಿಲ್ಲ. ಕುಮಾರಸ್ವಾಮಿಯವರ ಜಾಯಮಾನವೇ ಹಾಗೆ, ಸೆನ್ಸೇಷನಲ್ ಅನಿಸುವ ವಿಷಯವನ್ನು ಅರ್ಧಂಬರ್ಧ ಹೇಳೋದು!
ಮೈಸೂರು: ಸರ್ಕಾರದ ಹಂತದಲ್ಲಿ ಕಮೀಷನ್ (commission) ದಂಧೆ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎಂದು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಮೈಸೂರಲ್ಲಿ ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಹೆಚ್ ಡಿಕೆ, ಮುಖ್ಯಮಂತ್ರಿಯಾಗಿದ್ದಾಗ ತಾವು ಲಾಟರಿಗಳನ್ನು ನಿಷೇಧ ಮಾಡಿದ ಬಳಿಕ ಅದನ್ನು ಪುನರಾರಂಭಿಸುವಂತೆ ಬಹಳ ಒತ್ತಡ ಹೇರಲಾಗಿತ್ತು ಎಂದರು. ಹಣದ ಆಮಿಷ ಕೂಡ ಒಡ್ಡಲಾಗಿತ್ತು ಎಂದ ಅವರು ತನ್ನ ಮೇಲೆ ಒತ್ತಡ ಹೇರಿದವರು ಈಗಲೂ ಬದುಕಿದ್ದಾರೆ ಅಂತ ಹೇಳಿದರೇ ಹೊರತು ಹೆಸರು ಬಹಿರಂಗಪಡಿಸಲಿಲ್ಲ. ಕುಮಾರಸ್ವಾಮಿಯವರ ಜಾಯಮಾನವೇ ಹಾಗೆ, ಸೆನ್ಸೇಷನಲ್ ಅನಿಸುವ ವಿಷಯವನ್ನು ಅರ್ಧಂಬರ್ಧ ಹೇಳೋದು!
Latest Videos