ಪುಟ್ಟಮಗು ಮತ್ತು ವೃದ್ಧ ತಂದೆತಾಯಿಯೊಂದಿಗೆ ಕೊಲ್ಕತ್ತಾದಿಂದ ಬೆಂಗಳೂರಿಗೆ ಬಂದ ಮಹಿಳೆಗೆ ಕೆಐಎನಲ್ಲಿ ಕ್ಯಾಬ್ ಬುಕ್ ಆಗಲಿಲ್ಲ!

ಹಲವಾರು ಪ್ರಯತ್ನಗಳ ನಂತರ ಒಂದು ಕ್ಯಾಬ್ ಬುಕ್ ಆಗಿದೆ, ಆದರೆ ಅದು ಬಂದಾಗಲೇ ಸರಿ ಎಂದು ಹೇಳುವ ಅವರು ಕ್ಯಾಬ್ ನಲ್ಲಾದರೆ 2 ತಾಸುಗಳಲ್ಲಿ ಮನೆ ಸೇರಬಹುದು, ಬಿಎಂಟಿಸಿ ಬಸ್ ದೇವನಹಳ್ಳಿಯಿಂದ ಚಂದಾಪುರ ತಲುಪಲು 4 ಗಂಟೆ ತೆಗೆದುಕೊಳ್ಳುತ್ತದೆ ಅನ್ನುತ್ತಾರೆ.

ಬೆಂಗಳೂರು: ಮುಷ್ಕರ, ಬಂದ್ ಗಳು ನಡೆದಾಗ ಜನಸಾಮಾನ್ಯರು ಎಲ್ಲರಿಗಿಂತ ಹೆಚ್ಚು ಕಷ್ಟ ಅನುಭವಿಸೋದು. ಇಲ್ನೋಡಿ, ಈ ಮಹಿಳೆ ಕೊಲ್ಕತ್ತಾದಿಂದ (Kolkata) ವಿಮಾನವೊಂದರಲ್ಲಿ ಚಿಕ್ಕ ಮಗು ಮತ್ತು ವೃದ್ಧ ತಂದೆತಾಯಿಗಳೊಂದಿಗೆ ಇಂದು ಬೆಳಗ್ಗೆ ಬೆಂಗಳೂರಿನ ಕೆಐಎನಲ್ಲಿ (KIA Bengaluru) ಬಂದಿಳಿದಿದ್ದಾರೆ. ಆದರೆ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು (Karnataka State Private Transport Associations) ಇಂದು ಮುಷ್ಕರ ನಡೆಸುತ್ತಿರುವುದರಿಂದ ಏರ್ಪೋರ್ಟ್ ನಿಂದ ಚಂದಾಪುರದಲ್ಲಿರುವ (Chandapur) ತಮ್ಮ ಮನೆಗೆ ಹೋಗಲು ಕ್ಯಾಬ್ ಬುಕ್ ಆಗುತ್ತಿಲ್ಲ. ಮುಷ್ಕರಗಳಿಂದಾಗುವ ಸಮಸ್ಯೆಯನ್ನು ಜನಸಾಮಾನ್ಯರು ಯಾಕೆ ಎದುರಿಸಬೇಕು, ತಾನು ಪ್ರಮಾಣಿಕವಾಗಿ ಕ್ಯಾಬ್ ಬಾಡಿಗೆ ಕೊಡುವಾಗ ಚಿಕ್ಕ ಮಗು ಮತ್ತು ವಯಸ್ಸಾದ ತಂದೆತಾಯಿಗಳೊಂದಿಗೆ ಕಷ್ಟ ಯಾಕೆ ಪಡಬೇಕು? ಅಂತ ಅವರು ಪ್ರಶ್ನಿಸುತ್ತಾರೆ. ಹಲವಾರು ಪ್ರಯತ್ನಗಳ ನಂತರ ಒಂದು ಕ್ಯಾಬ್ ಬುಕ್ ಆಗಿದೆ, ಆದರೆ ಅದು ಬಂದಾಗಲೇ ಸರಿ ಎಂದು ಹೇಳುವ ಅವರು ಕ್ಯಾಬ್ ನಲ್ಲಾದರೆ 2 ತಾಸುಗಳಲ್ಲಿ ಮನೆ ಸೇರಬಹುದು, ಬಿಎಂಟಿಸಿ ಬಸ್ ದೇವನಹಳ್ಳಿಯಿಂದ ಚಂದಾಪುರ ತಲುಪಲು 4 ಗಂಟೆ ತೆಗೆದುಕೊಳ್ಳುತ್ತದೆ ಅನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ