[lazy-load-videos-and-sticky-control id=”g5meA1hQfoc”]
ಬೆಂಗಳೂರು: ಸಾಕಷ್ಟು ಆಸ್ಪತ್ರೆಗಳನ್ನ ಅಲೆದರು ರಿಪೋರ್ಟ್ ಇಲ್ಲ ಅಂತಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದ ಕಾರಣ ನಗರದ ಕಲಾಸಿಪಾಳ್ಯದ 45 ವರ್ಷದ ನಿವಾಸಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.
ರ್ಯಾಂಡಮ್ ಟೆಸ್ಟ್ ನಲ್ಲಿ ನೆಗಟಿವ್ ಬಂದಿದೆ ಆಗಿದ್ರು ಅದನ್ನ ನಾವೂ ನಂಬಲ್ಲ ಅಂತಾ ನಗರದ ಜಯದೇವ್, ಗಾಯತ್ರಿ ನರ್ಸಿಂಗ್ ಹೋಮ್, ಶೋಭಾ ನರ್ಸಿಂಗ್ ಹೋಮ್, ಐಟಿಲಿಟಿ, ಸ್ಪರ್ಶ್, ಕೆಂಗೇರಿ ಮಾತೃ ಆಸ್ಪತ್ರೆಗಳು ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿವೆ. ಕೊನೆಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಆ್ಯಕ್ಸಿಜನ್ ವ್ಯವಸ್ಥೆ ಮಾಡಿದರು ಮಹಿಳೆ ಬದುಕಲಿಲ್ಲ.
ಆರ್ಟಿಪಿಸಿಆರ್ ಟೆಸ್ಟ್ ನಲ್ಲಿ ಈಗ ವರದಿ ಪಾಸಿಟಿವ್ ಬಂದಿರುವುದರಿಂದ ಮೃತದೇಹವನ್ನು ಶಿಫ್ಟ್ ಮಾಡಲು ಬಿಬಿಎಂಪಿಯವರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ನಮ್ಮಲ್ಲಿ ಪಿಪಿಇ ಕಿಟ್ ಇಲ್ಲ ನೀವೇ ಕೊಡಬೇಕು ಅಂತಾ ಅವಾಜ್ ಬೇರೆ ಹಾಕುವುದರೊಂದಿಗೆ ನೀವೇ ಬಾಡಿಯನ್ನ ಕವರ್ ಮಾಡಿಕೊಟ್ರೆ ನಾವು ತೆಗೆದುಕೊಂಡು ಹೋಗ್ತೀವಿ ಇಲ್ಲ ಅಂದ್ರೆ ಇಲ್ಲೆ ಬಿಟ್ಟು ಹೋಗುತ್ತೇವೆ ಎಂದಿದ್ದಾರೆ.ಇದರಿಂದ ನೊಂದ ಕುಟುಂಬದವರು ಸೆಲೆಬ್ರಿಟಿಗಳು, ಜನಪ್ರತಿನಿಧಿಗಳಿಗೆ ಬೇಗ ರಿಪೋರ್ಟ್ ಸಿಗುತ್ತೆ ಆದರೆ ನಮ್ಮಂತವರಿಗೆ 5 ದಿನ ಕಳೆದರು ರಿಪೋರ್ಟ್ ಸಿಗುವುದಿಲ್ಲ ಸರ್ಕಾರ ಬರೀ ಸುಳ್ಳು ಹೇಳ್ತಿದೆ ಆದರೆ ವಾಸ್ತವವೆ ಬೇರೆ ಇದೆ ಎಂದು ಆಕ್ರೋಶ ಹೊರ ಹಾಕಿದ್ರು.
Published On - 1:13 pm, Sun, 19 July 20