Shakti Yojana: ಫ್ರೀ ಬಸ್ ಎಫೆಕ್ಟ್, ದೇವಸ್ಥಾನ ಮಾತ್ರವಲ್ಲ ದರ್ಗಾದಲ್ಲೂ ಜನಜಾತ್ರೆ

Shakti Yojana: ಫ್ರೀ ಬಸ್ ಎಫೆಕ್ಟ್, ದೇವಸ್ಥಾನ ಮಾತ್ರವಲ್ಲ ದರ್ಗಾದಲ್ಲೂ ಜನಜಾತ್ರೆ

ರಮೇಶ್ ಬಿ. ಜವಳಗೇರಾ
|

Updated on: Jun 18, 2023 | 4:49 PM

ಉಚಿತ ಬಸ್​ ಪ್ರಯಾಣ ಇರುವುದರಿ.ದ ಮಹಿಳೆಯರು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಹಾಗೂ ಚಾಮುಡಿ ಬೆಟ್ಟ ಸೇರಿದಂತೆ ಕರ್ನಾಟಕ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಇನ್ನು ದೇವಸ್ಥಾನಗಳಿಗೆ ಮಾತ್ರವಲ್ಲ ದರ್ಗಾಗಳಲ್ಲೂ ಮಹಿಳಾ ಮಣಿಗಳ ದಂಡು ಹರಿದುಬಂದಿದೆ.

ಗದಗ: ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಿಲ್ಲೆಯ ಮಹಿಳೆಯರಲ್ಲಿ ಸಂಚಲನ ಮೂಡಿಸಿದೆ. ದುಬಾರಿ ಬಸ್‌ ದರ ಪಾವತಿಸಲಾಗದೇ ತಮ್ಮ ಸಂಬಂಧಿಕರು ಇರುವ ಹಲವಾರು ದೂರದ ಊರುಗಳತ್ತ ಮುಖಮಾಡದೇ ವರ್ಷಾನುಗಟ್ಟಲೇ ತಮ್ಮ ಗ್ರಾಮದಲ್ಲೇ ಬೀಡುಬಿಡುತ್ತಿದ್ದ ಮಹಿಳೆಯರಿಗೆ ಈಗ ಉಚಿತ ಬಸ್‌ ಪ್ರಯಾಣಿಸುವ ಶಕ್ತಿ ಯೋಜನೆ ದೂರದ ಊರುಗಳಿಗೆ ಹೋಗಿಬರಲು ಅವಕಾಶ ಕಲ್ಪಿಸಿದೆ. ಹೀಗಾಗಿ ಮಹಿಳೆಯರು ಧಾರ್ಮಿಕ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ. ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಹಾಗೂ ಚಾಮುಡಿ ಬೆಟ್ಟ ಸೇರಿದಂತೆ ಕರ್ನಾಟಕ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇನ್ನು ದೇವಸ್ಥಾನಗಳಿಗೆ ಮಾತ್ರವಲ್ಲ ದರ್ಗಾಗಳಲ್ಲೂ ಮಹಿಳಾ ಮಣಿಗಳ ದಂಡು ಹರಿದುಬಂದಿದೆ.