ವಿಜಯಪುರಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಹಿಳಾ ಕಾರ್ಯಕರ್ತರಿಂದ ಸ್ವಾಗತ

|

Updated on: Nov 20, 2023 | 2:41 PM

ನನ್ನ ಸ್ವಾಗತಕ್ಕೆ ಹಾರ ತುರಾಯಿಗಳನ್ನು ತರಬೇಡಿ ಎಂದು ಸಿದ್ದರಾಮಯ್ಯ ಬಹಳ ದಿನಗಳ ಹಿಂದೆಯೇ ಹೇಳಿದ್ದಾರೆ. ಹಾಗಾಗೇ, ಕಾರ್ಯಕರ್ತರು ಹೂವಿನ ಹಾರ ತಂದರೂ ಹಾಕಿಸಿಕೊಳ್ಳೋದಿಲ್ಲ. ಆದರೆ, ಇಲ್ಲಿ ಹಾರಗಳನ್ನು ನಿರಾಕರಿಸದಿರೋದು ಆಶ್ಚರ್ಯ ಮೂಡಿಸುತ್ತದೆ.

ವಿಜಯಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಜಯಪುರ ಜಿಲ್ಲೆ ಪ್ರವಾಸದಲ್ಲಿದ್ದಾರೆ. ಇಂದು ಬೆಳಗ್ಗೆ ಅವರು ನೀಲಿ ಬಣ್ಣದ ಹೆಲಿಕಾಪ್ಟರ್ ಒಂದರಲ್ಲಿ ಗುಮ್ಮಟ ನಗರಕ್ಕೆ ಆಗಮಿಸಿದರು. ಅವರು ಹೋದೆಡೆಯೆಲ್ಲ ಕಾರ್ಯಕರ್ತರ, ಜನರ ನೂಕುನುಗ್ಗಲಿರೋದು ಸಾಮಾನ್ಯ ಸಂಗತಿ. ವಿಜಯಪುರದಲ್ಲಿ ಸ್ಥಿತಿಯೇನೂ ಭಿನ್ನವಾಗಿರಲಿಲ್ಲ. ಅವರ ಸ್ವಾಗತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರು (women party workers) ಸೇರಿದ್ದು ಸಹ ವಿಶೇಷ ಅಲ್ಲ; ಯಾಕೆಂದರೆ ಸಿದ್ದರಾಮಯ್ಯ ಇದ್ದಲ್ಲಿ ಮಹಿಳಾ ಕಾರ್ಯಕರ್ತರು, ಮಹಿಳಾ ಪದಾಧಿಕಾರಿಗಳು ಇಲ್ಲದೇ ಹೋದರೆ ಕೆಮೆರಾಗಳಲ್ಲಿ ಸೆರೆಯಾಗುವ ದೃಶ್ಯ ಅಪೂರ್ಣವೆನಿಸುತ್ತದೆ. ಹುನುಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಪತ್ನಿ ಮತ್ತು ಕಾಂಗ್ರೆಸ್ ಕಾರ್ಯಕರ್ತೆ ವೀಣಾ ಕಾಶಪ್ಪನವರ್ (Veen Kashappanavar) ಸಿದ್ದರಾಮಯ್ಯನವರ ದೊಡ್ಡ ಅಭಿಮಾನಿ. ಇಂದು ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿಯವರನ್ನು ಬರಮಾಡಿಕೊಂಡ ವೀಣಾ ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿ ಹೂಮಾಲೆಯನ್ನೂ ಹಾಕಿದರು. ನನ್ನ ಸ್ವಾಗತಕ್ಕೆ ಹಾರ ತುರಾಯಿಗಳನ್ನು ತರಬೇಡಿ ಎಂದು ಸಿದ್ದರಾಮಯ್ಯ ಬಹಳ ದಿನಗಳ ಹಿಂದೆಯೇ ಹೇಳಿದ್ದಾರೆ. ಹಾಗಾಗೇ, ಕಾರ್ಯಕರ್ತರು ಹೂವಿನ ಹಾರ ತಂದರೂ ಹಾಕಿಸಿಕೊಳ್ಳೋದಿಲ್ಲ. ಆದರೆ, ಇಲ್ಲಿ ಹಾರಗಳನ್ನು ನಿರಾಕರಿಸದಿರೋದು ಆಶ್ಚರ್ಯ ಮೂಡಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ