World Water Day: ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆ ಶಿವಕುಮಾರ್

Updated on: Mar 20, 2025 | 12:29 PM

ಕಾವೇರಿ ನೀರು ಉಳಿಸಲು, ಸರಿಯಾಗಿ ಬಳಸಲು ಅಭಿಯಾನ ನಡೆಸಲಾಗುತ್ತದೆ. ಆ ನಿಟ್ಟಿನಲ್ಲಿ ಕಾವೇರಿ ಪೂಜೆ ಮಾಡಬೇಕೆಂದು ಈಗಾಗಲೇ ಹೇಳಿದ್ದೆ. ಕೆಆರ್​ಎಸ್​ನಲ್ಲಿ ನಾನು ಈ ಬಗ್ಗೆ ಘೋಷಣೆ ಮಾಡಿದ್ದೆ. ಪ್ರಾಯೋಗಿಕವಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಒಂದು ತಿಂಗಳು ಅಭಿಯಾನ ಮಾಡ್ತೇವೆ ಎಂದು ಡಿಸಿಎಂ ತಿಳಿಸಿದ್ದಾರೆ.

ಬೆಂಗಳೂರು, ಮಾರ್ಚ್ 20: ವಿಶ್ವಜಲ ದಿನ (World Water Day) ಆಚರಣೆ ಅಂಗವಾಗಿ ಮತ್ತು ಕಾವೇರಿ ನೀರು ಉಳಿಸುವ ಅಭಿಯಾನಕ್ಕಾಗಿ ಶುಕ್ರವಾರ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ, ಪೂಜೆ ನೆರವೇರಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ವರ್ಷ 5ನೇ ಹಂತದ ಕಾವೇರಿ ಯೋಜನೆ ಪ್ರಾರಂಭಿಸಿದ್ದೇವೆ. ಬೆಂಗಳೂರಿಗೆ ನೀರು ಒದಗಿಸಲು ಎಲ್ಲಾ ವ್ಯವಸ್ಥೆ ಆಗಿದೆ. 6ನೇ ಹಂತಕ್ಕೂ ಡಿಪಿಆರ್ ರೆಡಿಯಾಗಿದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us