ತುಮಕೂರುನಲ್ಲಿ ವಿಶ್ವದಲ್ಲೇ ಅತಿಎತ್ತರದ ಅಕ್ವಾಡಕ್ಟ್ ಕೆನಾಲ್ ನಿರ್ಮಾಣ, ಇದರ ಉದ್ದ 10 ಕಿಮೀಗಿಂತ ಹೆಚ್ಚು

Updated on: Jun 30, 2025 | 2:04 PM

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಶಿರಾ ಶಾಸಕ ಟಿಬಿ ಜಯಚಂದ್ರ ಅವರು ಅಕ್ವಾಡಕ್ಟ್ ಕೆನಾಲ್ ವೀಕ್ಷಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಡ್ರೋಣ್ ಕೆಮೆರಾದಿಂದ ಸೆರೆಹಿಡಿದಿರುವ ವಿಹಂಗಮ ದೃಶ್ಯವನ್ನು ನೀವು ಇಲ್ಲಿ ವೀಕ್ಷಿಸುತ್ತಿರುವಿರಿ. ನೀರನ್ನು ಅದರ ಮೂಲದಿಂದ ದೂರದ ಸ್ಥಳಗಳಿಗೆ ಸಾಗಿಸಲು ಅಕ್ವಾಡಕ್ಟ್ ಕೆನಾಲ್​ಗಳನ್ನು ನಿರ್ಮಿಸಲಾಗುತ್ತದೆ.

ತುಮಕೂರು, ಜೂನ್ 30: ತುಮಕೂರು ಜಿಲ್ಲೆ ವಿವಿಧ ಕಾರಣಗಳಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಸೌರಶಕ್ತಿಯ ಪಾರ್ಕ್ ಬಳಿಕ ಅಕ್ವಾಡಕ್ಟ್ ಕೆನಾಲ್ ಜಿಲ್ಲೆಯ ಗುಬ್ಬಿ ತಾಲೂಕಿನ ಬೇಳೂರು-ಶಿರಾ ರಸ್ತೆಯಿಂದ ಶುರುಗೊಂಡು ಬೆಳ್ಳಾವಿವರಗೆ ನಿರ್ಮಾಣಗೊಂಡಿದೆ ಮತ್ತು ಇದು ವಿಶ್ವದಲ್ಲೇ ಅತಿಎತ್ತರದ ಅಕ್ವಾಡಕ್ಟ್ ನಾಲೆ ಆಗಿರೋದು ಜಿಲ್ಲೆಯ ಹಿರಿಮೆಗಳಿಗೆ ಮತ್ತೊದು ಗರಿಸೇರಿದೆ. ನಮ್ಮ ತುಮಕೂರು ವರದಿಗಾರ ನೀಡುವ ಮಾಹಿತಿ ಪ್ರಕಾರ ನಾಲೆಯನ್ನು 120 ಅಡಿಗಳ ಎತ್ತರದಲ್ಲಿ ನಿರ್ಮಿಸಲಾಗಿದೆ, 2 ಕಾರುಗಳು ಸಲೀಸಾಗಿ ಪಾಸ್​​ ಆಗುವಷ್ಟು ಅಗಲವಾಗಿದೆ ಮತ್ತು 10.5 ಕಿಮೀನಷ್ಟು ಉದ್ದವಾಗಿದೆ. ಅಕ್ವಾಡಕ್ಟ್ ಕೆನಾಲ್ 3,600 ಕ್ಯೂಸೆಕ್ಸ್ ನೀರನ್ನು ಹರಸುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ:  ಇ-ಖಾತೆ ಮಾಡಿಸಿಕೊಳ್ಳಿ, ವಂಚನೆಯಿಂದ ತಪ್ಪಿಸಿಕೊಳ್ಳಿ: ಡಿಸಿಎಂ ಡಿ. ಕೆ. ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More