ಯಲ್ಲಮ್ಮಗೆ ಸರ್ಪ ದೋಷ ವದಂತಿ ಪೂಜೆಯಿಂದ ಮಲಿನಗೊಂಡಿದ್ದ ಭೀಮಾನದಿ ಕ್ಲೀನ್
ಯಲ್ಲಮ್ಮನ ಪಾದುಕೆಯನ್ನು ಸರ್ಪ ನುಂಗಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಸಾವಿರಾರೂ ಮಹಿಳಾ ಭಕ್ತರು ಯಾದಗಿರಿಯ ಭೀಮಾನದಿಗೆ ಆಗಮಿಸಿ ಪೂಜೆ ಪುನಸ್ಕಾರದೊಂದಕಿಗೆ ಮಲಿನ ಮಾಡಿದ್ದು, ಇದೀಗ ಯಾದಗಿರಿ ನಗರಸಭೆ ಪೌರ ಕಾರ್ಮಿಕರು ಭೀಮಾನದಿಯನ್ನು ಸ್ವಚ್ಛಗೊಳಿಸಿದ್ದಾರೆ.ಹೌದು....ಯಲ್ಲಮ್ಮ ದೇವಿಗೆ ಸರ್ಪದೋಷ ಎಂಬ ವದಂತಿಯನ್ನು ನಂಬಿ ಭಕ್ತರು ಬಟ್ಟೆ, ಪೂಜೆ ಸಮಾಗ್ರಿಗಳನ್ನು ಎಸೆದು ಭೀಮಾನದಿಯನ್ನು ಸಂಪೂರ್ಣವಾಗಿ ಮಲಿನ ಮಾಡಿದ್ದರು. ಹಳೆ ಬಟ್ಟೆಗಳು, ಪೂಜಾ ಸಾಮಾಗ್ರಿ ಸೇರಿದಂತೆ ನಾನಾ ರೀತಿಯ ವಸ್ತುಗಳನ್ನ ಬಿಸಾಡಿದ್ದರಿಂದ ಭೀಮಾತೀರ ದಡ ಸಂಪೂರ್ಣವಾಗಿ ತುಂಬಿ ಗಲೀಜಾಗಿತ್ತು. ಅಲ್ಲದೇ ನೀರು ಸಹ ಹಸಿರು ಬಣ್ಣಕ್ಕೆ ತಿರುಗಿತ್ತು. ಇದರಿಂದ ಎಚ್ಚೆತ್ತ ಯಾದಗಿರಿ ನಗರಸಭೆ ಸುಮಾರು 50 ಪೌರ ಕಾರ್ಮಿಕರಿಂದ ಭೀಮಾನದಿಯನ್ನು ಸ್ವಚ್ಛತೆಗೊಳಿಸಿದೆ.
ಯಾದಗಿರಿ, (ನವೆಂಬರ್ 19): ಯಲ್ಲಮ್ಮನ ಪಾದುಕೆಯನ್ನು ಸರ್ಪ ನುಂಗಿದೆ ಎಂಬ ವದಂತಿ ಹರಡಿದ ಬೆನ್ನಲ್ಲೇ ಸಾವಿರಾರೂ ಮಹಿಳಾ ಭಕ್ತರು ಯಾದಗಿರಿಯ ಭೀಮಾನದಿಗೆ ಆಗಮಿಸಿ ಪೂಜೆ ಪುನಸ್ಕಾರದೊಂದಕಿಗೆ ಮಲಿನ ಮಾಡಿದ್ದು, ಇದೀಗ ಯಾದಗಿರಿ ನಗರಸಭೆ ಪೌರ ಕಾರ್ಮಿಕರು ಭೀಮಾನದಿಯನ್ನು ಸ್ವಚ್ಛಗೊಳಿಸಿದ್ದಾರೆ.ಹೌದು….ಯಲ್ಲಮ್ಮ ದೇವಿಗೆ ಸರ್ಪದೋಷ ಎಂಬ ವದಂತಿಯನ್ನು ನಂಬಿ ಭಕ್ತರು ಬಟ್ಟೆ, ಪೂಜೆ ಸಮಾಗ್ರಿಗಳನ್ನು ಎಸೆದು ಭೀಮಾನದಿಯನ್ನು ಸಂಪೂರ್ಣವಾಗಿ ಮಲಿನ ಮಾಡಿದ್ದರು. ಹಳೆ ಬಟ್ಟೆಗಳು, ಪೂಜಾ ಸಾಮಾಗ್ರಿ ಸೇರಿದಂತೆ ನಾನಾ ರೀತಿಯ ವಸ್ತುಗಳನ್ನ ಬಿಸಾಡಿದ್ದರಿಂದ ಭೀಮಾತೀರ ದಡ ಸಂಪೂರ್ಣವಾಗಿ ತುಂಬಿ ಗಲೀಜಾಗಿತ್ತು. ಅಲ್ಲದೇ ನೀರು ಸಹ ಹಸಿರು ಬಣ್ಣಕ್ಕೆ ತಿರುಗಿತ್ತು. ಇದರಿಂದ ಎಚ್ಚೆತ್ತ ಯಾದಗಿರಿ ನಗರಸಭೆ ಸುಮಾರು 50 ಪೌರ ಕಾರ್ಮಿಕರಿಂದ ಭೀಮಾನದಿಯನ್ನು ಸ್ವಚ್ಛತೆಗೊಳಿಸಿದೆ.
ಸದ್ಯ ಪೌರ ಕಾರ್ಮಿಕರ ನೆರವಿನಿಂದ ನದಿ ಒಡಲು ಸ್ವಚ್ಚಗೊಂಡಿದ್ದು, ಮತ್ತೆ ಈ ರೀತಿ ಆಗದಂತೆ ನಗರಸಭೆ ನದಿಯ ದರಡದಲ್ಲಿ ನಾಮಫಲಕ ಹಾಕಿದೆ. ನದಿಯಲ್ಲಿ ಪೂಜೆ ಮಾಡಬಾರದು,ಪೂಜಾ ಸಾಮಾಗ್ರಿಗಳನ್ನ ಎಸೆಯಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದ ಕಾನೂನು ರೀತಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
