‘ಚೌಕಿ’ ಹೇಳಿಕೆ ವಿವಾದ: ಸ್ಪಷ್ಟನೆ ಕೊಟ್ಟ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ

Edited By:

Updated on: Oct 12, 2025 | 4:11 PM

ತಮ್ಮ ತಂದೆ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಪುಸ್ತಕ ಬಿಡುಗಡೆ ಸಂದರ್ಭ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಆಡಿದ್ದ ಕೆಲ ಮಾತುಗಳು ವಿವಾದ ಸೃಷ್ಟಿಸಿದ್ದವು. ಈ ಬಗ್ಗೆ Tv9 ಜೊತೆ ಮಾತನಾಡಿರುವ ಅಶ್ವಿನಿ, ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ತಾವು ಆಡಿರುವ ಮಾತಿನ ಹಿಂದಿದ್ದ ಉದ್ದೇಶ ಏನಾಗಿತ್ತು ಎಂಬುದನ್ನ ವಿವರಿಸಿದ್ದಾರೆ.

ಉಡುಪಿ, ಅಕ್ಟೋಬರ್​ 12: ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ‘ಯಕ್ಷಚಂದ್ರ ಪುಸ್ತಕ’ ಬಿಡುಗಡೆ ಸಂದರ್ಭ ಯಕ್ಷಗಾನ ಕಲಾವಿದೆ, ಉಪನ್ಯಾಸಕಿ ಅಶ್ವಿನಿ ಕೊಂಡದಕುಳಿ ಆಡಿದ್ದ ಕೆಲ ಮಾತುಗಳು ಭಾರಿ ವಿವಾದಕ್ಕೆ ಕಾರಣವಾಗಿದ್ದವು. ಯಕ್ಷಗಾನದ (Yakshagana) ಚೌಕಿಯಲ್ಲಿ ಮಹಿಳಾ ಕಲಾವಿದರನ್ನ ಹೇಗೆ ನೋಡಲಾಗುತ್ತೆ ಎಂಬ ಬಗ್ಗೆ ಅವರಾಡಿದ್ದ ಮಾತುಗಳು ಪುರುಷ ಕಲಾವಿದರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಬೆನ್ನಲ್ಲೇ ಅಶ್ವಿನಿ ಅವರ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಎಂದೂ ಕೆಲವರು ಘೋಷಿಸಿದ್ದರು. ಈ ಎಲ್ಲ ವಿವಾದಗಳ ಬಗ್ಗೆ Tv9 ಜೊತೆ ಸ್ವತಃ ಅಶ್ವಿನಿ ಕೊಂಡದಕುಳಿ ಅವರೇ ಮಾತನಾಡಿದ್ದು, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತನ್ನ ತಂದೆಯ ಉತ್ತಮ ಗುಣಗಳನ್ನು ಹೊಗಳುವುದು ತಪ್ಪೇ? ಹೆಣ್ಣು ಮಗಳಿಗೆ ಇಷ್ಟು ಸ್ವಾತಂತ್ರ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.