ವೇದಿಕೆ ಮೇಲಿದ್ದ ಡಿಕೆ ಶಿವಕುಮಾರ್ ಕೈಯಿಂದ ಮೈಕ್ ಕಿತ್ತುಕೊಂಡು ಮುನಿರತ್ನ ಅನೌನ್ಸ್ ಮಾಡಿದ್ದೇನು?
ಬೆಂಗಳೂರು ನಡಿಗೆ. ಜಿಬಿಎ ನಂತ್ರ ಬೆಂಗಳೂರು ಜನರ ಸಮಸ್ಯೆ ಕುಂದು ಕೊರತೆ ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್ ಇವತ್ತು ಎರಡನೇ ದಿನದ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜೆಪಿ ಪಾರ್ಕ್ ಹೇಳಿ ಕೇಳಿ ಮುನಿರತ್ನ ಕ್ಷೇತ್ರಕ್ಕೆ ಒಳಪಡುವ ಸ್ಥಳ. ಹೀಗಾಗಿ ಕಾರ್ಯಕ್ರಮಕ್ಕೆ ಶಾಸಕ ಮುನಿರತ್ನ ಕೂಡ ಬಂದಿದ್ದರು. ಆದ್ರೆ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ನೋಡಿಯೂ ನೋಡದಂತಿದ್ದರು. ಎಲ್ಲಾ ಪಾರ್ಕ್ ರೌಂಡ್ಸ್ ಹಾಕಿದ್ದ ಡಿಕೆ, ವೇದಿಕೆಗೆ ಬಂದಿದ್ದು, ಮುಂಭಾಗ ಜನರ ಮಧ್ಯೆ ಆರ್ ಎಸ್ ಎಸ್ ಗಣವೇಷದಲ್ಲಿ ಕುಳಿತುಕೊಂಡಿದ್ದ ಮುನಿರತ್ನ ಅವರನ್ನು ಏ.. ಕರೀ ಟೋಪಿ ಎಂಎಲ್ಎ.. ಬನ್ನಿ ಎಂದು ಜೋರು ಧ್ವನಿಯಲ್ಲಿ ಕರೆದಿದ್ದಾರೆ. ಹೀಗೆ ಕರೆದಿದ್ದಕ್ಕೆ ಆಕ್ರೋಶಗೊಂಡ ಮುನಿರತ್ನ ಎದ್ದು ವೇದಿಕೆ ಮೇಲೆ ಹೋಗಿ ಡಿಕೆ ಶಿವಕುಮಾರ್ ಕೈನಲ್ಲಿದ್ದ ಮೈಕ್ ಬಲವಂತಾಗಿ ತೆಗೆದುಕೊಂಡು ನನಗೆ ಆಹ್ವಾನ ಕೊಟ್ಟಿಲ್ಲ ಎಂದು ಜನರ ಮುಂದೆ ಅನೌನ್ಸ್ ಮಾಡಿದ್ದಾರೆ.
ಬೆಂಗಳೂರು, (ಅಕ್ಟೋಬರ್ 12): ಬೆಂಗಳೂರು ನಡಿಗೆ. ಜಿಬಿಎ ನಂತ್ರ ಬೆಂಗಳೂರು ಜನರ ಸಮಸ್ಯೆ ಕುಂದು ಕೊರತೆ ಆಲಿಸಲು ಡಿಸಿಎಂ ಡಿಕೆ ಶಿವಕುಮಾರ್ ಇವತ್ತು ಎರಡನೇ ದಿನದ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಜೆಪಿ ಪಾರ್ಕ್ ಹೇಳಿ ಕೇಳಿ ಮುನಿರತ್ನ ಕ್ಷೇತ್ರಕ್ಕೆ ಒಳಪಡುವ ಸ್ಥಳ. ಹೀಗಾಗಿ ಕಾರ್ಯಕ್ರಮಕ್ಕೆ ಶಾಸಕ ಮುನಿರತ್ನ ಕೂಡ ಬಂದಿದ್ದರು. ಆದ್ರೆ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ನೋಡಿಯೂ ನೋಡದಂತಿದ್ದರು. ಎಲ್ಲಾ ಪಾರ್ಕ್ ರೌಂಡ್ಸ್ ಹಾಕಿದ್ದ ಡಿಕೆ, ವೇದಿಕೆಗೆ ಬಂದಿದ್ದು, ಮುಂಭಾಗ ಜನರ ಮಧ್ಯೆ ಆರ್ ಎಸ್ ಎಸ್ ಗಣವೇಷದಲ್ಲಿ ಕುಳಿತುಕೊಂಡಿದ್ದ ಮುನಿರತ್ನ ಅವರನ್ನು ಏ.. ಕರೀ ಟೋಪಿ ಎಂಎಲ್ಎ.. ಬನ್ನಿ ಎಂದು ಜೋರು ಧ್ವನಿಯಲ್ಲಿ ಕರೆದಿದ್ದಾರೆ. ಹೀಗೆ ಕರೆದಿದ್ದಕ್ಕೆ ಆಕ್ರೋಶಗೊಂಡ ಮುನಿರತ್ನ ಎದ್ದು ವೇದಿಕೆ ಮೇಲೆ ಹೋಗಿ ಡಿಕೆ ಶಿವಕುಮಾರ್ ಕೈನಲ್ಲಿದ್ದ ಮೈಕ್ ಬಲವಂತಾಗಿ ತೆಗೆದುಕೊಂಡು ನನಗೆ ಆಹ್ವಾನ ಕೊಟ್ಟಿಲ್ಲ ಎಂದು ಜನರ ಮುಂದೆ ಅನೌನ್ಸ್ ಮಾಡಿದ್ದಾರೆ.

