ಒಂದು ಹಂತ ಮೇಲಕ್ಕೆ ಹೋದ ಯಶ್ ಫ್ಯಾನ್ಸ್; ಮೆಟ್ರೋದಲ್ಲೂ ಮಿಂಚಿದ ರಾಕಿಂಗ್ ಸ್ಟಾರ್

Updated on: Jan 06, 2026 | 2:19 PM

Yash Birthday: ನಟ ಯಶ್ ಜನ್ಮದಿನ ಜನವರಿ 8ರಂದು. ಫ್ಯಾನ್ಸ್ ಇದಕ್ಕಾಗಿ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಈಗ ಮೆಟ್ರೋಗೆ ಯಶ್ ಅವರ ಫೋಟೋ ಹಾಕಲಾಗಿದೆ. ಈ ಸಂದರ್ಭದ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಕಮೆಂಟ್​​ಗಳು ಬಂದಿವೆ.

ನೆಚ್ಚಿನ ಹಿರೋನ ಬರ್ತ್​​ಡೇ ಎಂದಾಗ ಕಟೌಟ್ ಹಾಕಲಾಗುತ್ತದೆ. ಅದಕ್ಕೆ ಹಾಲಿನ ಅಭಿಷೇಕ ಮಾಡಲಾಗುತ್ತದೆ. ಈಗ ಯಶ್ ಅಭಿಮಾನಿಗಳು ಒಂದು ಹಂತ ಮೇಲಕ್ಕೆ ಹೋಗಿದ್ದಾರೆ. ಜನವರಿ 8 ಯಶ್ ಜನ್ಮದಿನ. ಹೀಗಾಗಿ, ನಮ್ಮ ಮೆಟ್ರೋದಲ್ಲಿ ಯಶ್ ಫೋಟೋ ರಾರಾಜಿಸಲಿದೆ. ಅಭಿಮಾನಿ ಸಂಘಟನೆಗಳು ಮೆಟ್ರೋಗೆ ಜಾಹೀರಾತು ನೀಡಿ, ಯಶ್​​ಗೆ ಬರ್ತ್​ಡೇ ವಿಶ್ ತಿಳಿಸಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jan 06, 2026 02:18 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More