ಕ್ಯೂಟ್ ವಿಡಿಯೋ ಹಂಚಿಕೊಂಡು ಮಗಳು ಆಯ್ರಾಗೆ ಬರ್ತ್ಡೇ ವಿಶ್ ತಿಳಿಸಿದ ಯಶ್
ರಾಕಿಂಗ್ ಸ್ಟಾರ್ ಯಶ್ ಮಗಳು ಆಯ್ರಾಗೆ ಈಗ ಏಳು ವರ್ಷ ಎಂದರೆ ನೀವು ನಂಬಲೇಬೇಕು. ಹೌದು. ಈ ಬಗ್ಗೆ ಯಶ್ ಅವರು ಮಾಹಿತಿ ನೀಡಿದ್ದಾರೆ. ಕ್ಯೂಟ್ ವಿಡಿಯೋ ಹಂಚಿಕೊಂಡು ಅವರು ಮಗಳು ಎಷ್ಟು ಬೇಗ ದೊಡ್ಡವರಾಗುತ್ತಾರೆ ಎಂಬುದನ್ನು ಹೇಳಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ.
ರಾಕಿಂಗ್ ಸ್ಟಾರ್ ಯಶ್ ಮಗಳು ಆಯ್ರಾಗೆ ಈಗ ಏಳು ವರ್ಷ ತುಂಬಿದೆ. 2018ರ ಡಿಸೆಂಬರ್ 2ರಂದು ಆಯ್ರಾ ಜನಿಸಿದಳು. ಆಯ್ರಾ ಅಂಬೆಗಾಲು ಇಡುತ್ತಿರುವ ವಿಡಿಯೋನ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮಗಳಿಗೆ ಬರ್ತ್ಡೇ ವಿಶ್ ತಿಳಿಸಿದರು. ಆಯ್ರಾ ಅವರು ಎಷ್ಟು ಬೇಗ ಬೆಳೆದು ದೊಡ್ಡವಳಾದಳು ಎಂದು ಅನೇಕರು ಹೇಳಿದ್ದಾರೆ. ಆಯ್ರಾಗೆ ಯಥರ್ವ್ ಹೆಸರಿನ ತಮ್ಮ ಕೂಡ ಇದ್ದಾನೆ. ಆತ ಆಯ್ರಾಗಿಂತ ಕೇವಲ ಒಂದು ವರ್ಷ ಸಣ್ಣವನು. ಆಯ್ರಾ ಹಾಗೂ ಯರ್ಥವ್ ವಿಡಿಯೋ ಹಾಗೂ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವುದನ್ನು ನೀವು ಕಾಣಬಹುದು. ಇತ್ತೀಚೆಗೆ ಅದ್ದೂರಿಯಾಗಿ ಯಥರ್ವ್ ಜನ್ಮದಿನ ಆಚರಿಸಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 03, 2025 09:33 AM