AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಪುಷ್ಪಾ-ದೇವರಾಜ್ ಮಧ್ಯೆ ವಾಗ್ವಾದ

ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಪುಷ್ಪಾ-ದೇವರಾಜ್ ಮಧ್ಯೆ ವಾಗ್ವಾದ

ರಾಜೇಶ್ ದುಗ್ಗುಮನೆ
|

Updated on: Jan 31, 2026 | 1:36 PM

Share

ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅವರಿಗೆ ಸೇರಿದ ನಿವೇಶನ ಸಮಸ್ಯೆ ಎದುರಿಸುತ್ತಿದೆ. 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆ ಕಾಂಪೌಂಡ್ ಅನ್ನು ದೇವರಾಜು ಎಂಬುವರು ಜೆಸಿಬಿ ಬಳಸಿ ಒಡೆದು ಹಾಕಿದ್ದರು. ಇಂದು ಸೈಟ್ ಕ್ಲೀನ್ ಮಾಡಲು ಹೋದಾಗ ಕಿರಿಕ್ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಹಾಸನದಲ್ಲಿ ಯಶ್ ತಾಯಿ ಪುಷ್ಪಾ ಅವರದ್ದು ಎನ್ನಲಾದ ನಿವೇಶನವು ವ್ಯಾಜ್ಯಕ್ಕೆ ಸಿಲುಕಿದೆ. 125*45 ಅಳತೆಯ ಸೈಟ್ ಅನ್ನು ಪುಷ್ಪಾ ಖರೀದಿ ಮಾಡಿದ್ದರು. ಸೈಟ್​ನ ಮೂಲ ಮಾಲೀಕರು ನಮ್ಮ ಕಡೆಯವರು ಎಂದು ದೇವರಾಜ್​ ಎಂಬುವವರು ಹೇಳುತ್ತಿದ್ದಾರೆ. 125*45 ಅಳತೆಯ ಸೈಟಿಗೆ ಪುಷ್ಪ ಅವರು ಕಾಂಪೌಂಡ್ ಹಾಕಿದ್ದರು. ಆದರೆ, ಅದನ್ನು ಒಡೆದು ಹಾಕಲಾಗಿತ್ತು. ಇಂದು ಸೈಟ್ ಕ್ಲೀನ್ ಮಾಡಿಸಲು ಪುಷ್ಪಾ ಬಂದಿದ್ದರು. ಈ ವೇಳೆ ಯಶ್​ ತಾಯಿ ಪುಷ್ಪಾ ಹಾಗೂ ದೇವರಾಜ್ ನಡುವೆ ವಾಗ್ವಾದ ಉಂಟಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More