ಯಡಿಯೂರಪ್ಪನವರನ್ನು ಬಿಜೆಪಿ ಯಾವತ್ತೂ ಸರಿಯಾಗಿ ನಡೆಸಿಕೊಳ್ಳಲಿಲ್ಲ: ಎಮ್ ಬಿ ಪಾಟೀಲ, ಕಾಂಗ್ರೆಸ್ ಶಾಸಕ

Edited By:

Updated on: Jul 23, 2022 | 12:23 PM

ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲಬಾರಿಗೆ ಬಿಜೆಪಿ ಸರ್ಕಾರವೊಂದು ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ಯಡಿಯೂರಪ್ಪನವರಿಂದಲೇ, ಆದರೆ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಪಾಟೀಲ್ ಹೇಳಿದರು.

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು (BS Yediyurappa) ಬಿಜೆಪಿ (BJP) ಮೂಲೆಗುಂಪು ಮಾಡಿದೆ ಮತ್ತು ಅವರು ತಮ್ಮ ಪಕ್ಷದ ಧೋರಣೆಗಳಿಂದ ಭ್ರಮನಿರಸನಗೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎಮ್ ಬಿ ಪಾಟೀಲ (MB Patil) ಹೇಳಿದರು. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲಬಾರಿಗೆ ಬಿಜೆಪಿ ಸರ್ಕಾರವೊಂದು ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು ಯಡಿಯೂರಪ್ಪನವರಿಂದಲೇ, ಆದರೆ ಪಕ್ಷ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಪಾಟೀಲ್ ಹೇಳಿದರು.