ರಾತ್ರಿ ಸಮಯ ರಸ್ತೆಗಳಲ್ಲಿ ಪುಂಡಾಟ ನಡೆಸುವ ಹಾಸನದ ಯುವಕರಿಗೆ ಎಸ್ ಪಿ ಹರಿರಾಮ್ ಶಂಕರ್ ಎಚ್ಚರಿಕೆ ನೀಡಿದರು
ಸುಮಾರು 100 ಯುವಕರನ್ನು ಠಾಣೆಗೆ ಕರೆಸಿ ಎಸ್ ಪಿ ಹರಿರಾಮ್ ಶಂಕರ್ ಖಡಕ್ಕಾಗಿ ವಾರ್ನ್ ಮಾಡಿದರು.
ಹಾಸನ ಜಿಲ್ಲೆಯ ಪೆನ್ಷನ್ ಮೊಹಲ್ಲಾದ ಪುಂಡ ಯುವಕರು ರಾತ್ರಿ ಸಮಯ, ಬೀದಿಗಳಲ್ಲಿ ನಿಂತು ಸಿಗರೇಟ್ ಸೇದುವ, ಮಟ್ಕಾ ಆಡುವ, ಅಪಾಯಕಾರಿ ರೀತಿಯಲ್ಲಿ ಬೈಕ್ ಓಡಿಸುವ, ವ್ಹೀಲಿಂಗ್ (wheeling) ಮಾಡುವ ಪ್ರಕರಣಗಳು ಹೆಚ್ಚಿರುವ ಬಗ್ಗೆ ಸಾರ್ವಜನಿಕರು ದೂರಿದ ಬಳಿಕ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಎಚ್ಚರಿಸಿದರು. ಸುಮಾರು 100 ಯುವಕರನ್ನು ಠಾಣೆಗೆ ಕರೆಸಿ ಎಸ್ ಪಿ ಹರಿರಾಮ್ ಶಂಕರ್ (SP Hariram Shankar) ಖಡಕ್ಕಾಗಿ ವಾರ್ನ್ ಮಾಡಿದರು.
Latest Videos