ಯಡಿಯೂರಪ್ಪ ಹಿರಿಯರು, ಸಿದ್ದರಾಮಯ್ಯ ಬಗ್ಗೆ ನೀಡಿದ ಹೇಳಿಕೆಗೆ ಕಾಮೆಂಟ್ ಮಾಡುವುದಿಲ್ಲ: ಡಿಕೆ ಶಿವಕುಮಾರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2022 | 1:38 PM

ಸಿದ್ದರಾಮಯ್ಯ ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿದ್ದಾರೆ, ಅಲ್ಲದೆ ಇವರಿಬ್ಬರು ಹಿರಿಯ ರಾಜಕಾರಣಿಯಾಗಿರುವುದರಿಂದ ನಡುವೆ ತಾನು ಮಾತಾಡುವುದು ಸರಿಯಲ್ಲ ಎಂದು ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯನವರಲ್ಲಿ ದೇಶಭಕ್ತಿಯೇ (patriotism) ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಕ್ಕೆ ಪ್ರತಿಕ್ರಿಯೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ನಿರಾಕರಿಸಿದರು. ಮಂಗಳವಾರರ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಿವಕುಮಾರ, ಯಡಿಯೂರಪ್ಪ ಹಿರಿಯ ರಾಜಕಾರಣಿಯಾಗಿದ್ದಾರೆ, ಅವರ ಹೇಳಿಕೆ ಬಗ್ಗೆ ಕಾಮೆಂಟ್ ಮಾಡಲ್ಲ, ಸಿದ್ದರಾಮಯ್ಯ ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಿದ್ದಾರೆ, ಅಲ್ಲದೆ ಇವರಿಬ್ಬರು ಹಿರಿಯ ರಾಜಕಾರಣಿಯಾಗಿರುವುದರಿಂದ ನಡುವೆ ತಾನು ಮಾತಾಡುವುದು ಸರಿಯಲ್ಲ ಎಂದು ಹೇಳಿದರು.