Video: ರೀಲ್ಸ್​​ಗಾಗಿ ಫ್ಲೈಓವರ್​ನಿಂದ ಕೆಳಗೆ ಜಂಪ್ ಮಾಡಿದ ಯುವಕ, ಆಮೇಲೇನಾಯ್ತು ನೋಡಿ

Updated on: Aug 26, 2025 | 9:06 AM

ರೀಲ್ಸ್​​ಗಾಗಿ ಯುವಕನೊಬ್ಬ ಫ್ಲೈಓವರ್​​ನಿಂದ ಕೆಳಗೆ ಹಾರಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕ್ಲಿಪ್‌ನಲ್ಲಿರುವ ವ್ಯಕ್ತಿ ಸೇತುವೆಯ ಕೆಳಗೆ ಹಾದುಹೋಗುವ ವ್ಯಾನ್ ಮೇಲೆ ಜಿಗಿಯಬೇಕಿತ್ತು, ಆದರೆ ದುರಾದೃಷ್ಟವಶಾತ್ ಆತ ಹಾರುವಷ್ಟರಲ್ಲಿ ವ್ಯಾನ್ ಮುಂದಕ್ಕೆ ಹೋಗಿದೆ, ಆತ ಕೆಳಗೆ ಬಿದ್ದಿದ್ದಾನೆ. ಕೈಕಾಲುಗಳ ಮೂಳೆಗಳು ಮುರಿದಿರಬಹುದು.  ಆಸ್ಪತ್ರೆಗೆ ಕರೆದೊಯ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ರೀಲ್ಸ್​​ಗಾಗಿ ಯುವಕನೊಬ್ಬ ಫ್ಲೈಓವರ್​​ನಿಂದ ಕೆಳಗೆ ಹಾರಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಕ್ಲಿಪ್‌ನಲ್ಲಿರುವ ವ್ಯಕ್ತಿ ಸೇತುವೆಯ ಕೆಳಗೆ ಹಾದುಹೋಗುವ ವ್ಯಾನ್ ಮೇಲೆ ಜಿಗಿಯಬೇಕಿತ್ತು, ಆದರೆ ದುರಾದೃಷ್ಟವಶಾತ್ ಆತ ಹಾರುವಷ್ಟರಲ್ಲಿ ವ್ಯಾನ್ ಮುಂದಕ್ಕೆ ಹೋಗಿದೆ, ಆತ ಕೆಳಗೆ ಬಿದ್ದಿದ್ದಾನೆ. ಕೈಕಾಲುಗಳ ಮೂಳೆಗಳು ಮುರಿದಿರಬಹುದು.  ಆಸ್ಪತ್ರೆಗೆ ಕರೆದೊಯ್ದಿರಬಹುದು ಎಂದು ಅಂದಾಜಿಸಲಾಗಿದೆ. ಈ ಘಟನೆ ಎಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.ಆತ ರಸ್ತೆಯಲ್ಲಿ ಬಿದ್ದು ಹೊರಳಾಡಿ ಅಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಜನರು ಒಂದೇ ದಿನದಲ್ಲಿ ವೈರಲ್ ಆಗಬೇಕು, ಹೆಚ್ಚೆಚ್ಚು ಫಾಲೋವರ್ಸ್​ ಬೇಕೆಂದು ಇಂತಹ ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಈ ವಿಡಿಯೋವನ್ನು @Ldphobiawatch ಹಂಚಿಕೊಂಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ