ಚಿಕ್ಕಮಗಳೂರಿನ ಶಾಂತವೇರಿ ದರ್ಗಾದಲ್ಲಿ ದಾಂಧಲೆ ನಡೆಸಿದ ಯುವಕರ ಗುಂಪು
ಚಿಕ್ಕಮಗಳೂರಿನಲ್ಲಿ ಇಂದು (ಡಿ.26) ದತ್ತಜಯಂತಿ ಆಚರಿಸಲಾಗುತ್ತಿದೆ. ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳುತ್ತಿದ್ದಾರೆ. ದತ್ತಜಯಂತಿಯ ಕೊನೆಯ ದಿನಾವಾದ ಇಂದು ದತ್ತ ಪಾದುಕೆ ದರ್ಶನ ಪಡೆಯುತ್ತಿದ್ದಾರೆ. ಇದೇರೀತಿ ದತ್ತಪೀಠಕ್ಕೆ ತೆರಳುತ್ತಿದ್ದ ಯುವಕರ ಗುಂಪು ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದ ದರ್ಗಾದಲ್ಲಿ ದಾಂಧಲೆ ನಡೆಸಿದೆ.
ಚಿಕ್ಕಮಗಳೂರು, ಡಿಸೆಂಬರ್ 26: ದತ್ತಪೀಠಕ್ಕೆ (Dattapeeta) ತೆರಳುತ್ತಿದ್ದ ಯುವಕರ ಗುಂಪು ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದ ದರ್ಗಾದಲ್ಲಿ (Durga) ದಾಂಧಲೆ ನಡೆಸಿದೆ. ಗೋರಿಗಳ ಮೇಲೆ ಹೊದಿಸಿದ್ದ ಬಟ್ಟೆ ತೆಗೆದು ಮತ್ತು ಅಲ್ಲಿದ್ದ ವಸ್ತುಗಳನ್ನು ಹೊರಕ್ಕೆ ಎಸೆದು ದಾಂಧಲೆ ನಡೆಸಿದೆ. ಈ ವೇಳೆ ಪ್ರಶ್ನಿಸಲು ಹೋದ ಪೊಲೀಸರ ಮೇಲೂ ಯುವಕರ ಗುಂಪು ಹಲ್ಲೆ ನಡೆಸಲು ಯತ್ನಿಸಿದೆ. ಈ ಘಟನೆಯನ್ನು ಕಂಡ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಗುಂಪು ಕಾಲ್ಕಿತ್ತಿದೆ. ಶಾಂತವೇರಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಯುವಕರ ಗುಂಪು ಶಿವಮೊಗ್ಗ ಜಿಲ್ಲೆ ನೋಂದಣಿ ವಾಹನದಲ್ಲಿ ಬಂದಿದ್ದರು ಸ್ಥಳೀಯರು ಮಾಹಿತಿ ನೀಡಿದ್ದಾರೆ.
Published on: Dec 26, 2023 12:24 PM