ಯಾದಗಿರಿ: ಬೈಕ್ ಕೊಡಿಸದ ಕಾರಣ ತಂದೆ ಕತೆ ಮುಗಿಸಿದ ಆರೋಪದಲ್ಲಿ ಪಾಪಿ ಮಗ ಜೈಲುಪಾಲು

|

Updated on: Mar 11, 2025 | 11:56 AM

ಚನ್ನಾರೆಡ್ಡಿಯು ಬ್ಯಾಂಕ್ ಖಾತೆಯಲ್ಲಿ ಎರಡು ಲಕ್ಷ ರೂ. ಇದ್ದ ಸಂಗತಿ ಶೇಖರ್ ಗಮನಕ್ಕೆ ಬಂದಿತ್ತು, ಹಾಗಾಗೇ ಬೈಕ್ ಕೊಡಿಸುವಂತೆ ತಂದೆಯನ್ನು ಪೀಡಿಸುತ್ತಿದ್ದ. ಮದ್ಯವ್ಯಸನಿಯಾಗಿದ್ದ ಮಗನಿಗೆ ಬೈಕ್ ಕೊಡಿಸಿದರೆ ಅನಾಹುತ ಮಾಡಿಕೊಂಡಾನು ಎಂಬ ಕಾರಣಕ್ಕೆ ಚನ್ನಾರೆಡ್ಡಿ ಮಗನ ಬೇಡಿಕೆಯನ್ನು ಮುಂದೂಡುತ್ತಿದ್ದ. ರೊಚ್ಚಿಗೆದ್ದ ಮಗ ಅಪ್ಪನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡನೆಂದು ಕತೆ ಕಟ್ಟಲಾರಂಭಿಸಿದ್ದನಂತೆ.

ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ತಾಂಡಾದಲ್ಲಿ (Kirdalli Taanda) ಬೈಕ್ ಖರೀದಿಸಲು ಹಣ ನೀಡದ ಕಾರಣಕ್ಕೆ ಶೇಖರ್ ಹೆಸರಿನ ಯುವಕನೊಬ್ಬ ಹೆತ್ತ ತಂದೆಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ. ಮೃತ ತಂದೆಯನ್ನು 50-ವರ್ಷ-ವಯಸ್ಸಿನ ಚನ್ನಾರೆಡ್ಡಿ ರಾಠೋಡ್ ಎಂದು ಗುರುತಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡಿದ್ದ ಕೆಂಭಾವಿ ಪೊಲೀಸರು ಶೇಖರ್ ಬಂಧಿಸಿ ಜೈಲಿಗಟ್ಟಿದ್ದಾರೆ. ಚನ್ನಾರೆಡ್ಡಿಯ ತಾಯಿ ತಾರಾಬಾಯಿ (ಆರೋಪಿಯ ಅಜ್ಜಿ) ಘಟನೆಯ ಬಗ್ಗೆ ನಮ್ಮ ವರದಿಗಾರನಿಗೆ ವಿವರಣೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಕೆಲಸ ಸರಿ ಮಾಡಿಲ್ಲ ಎಂದಿದ್ದಕ್ಕೆ ಚಾಕುವಿನಿಂದ ಇರಿದು ಸಹೋದ್ಯೋಗಿಯ ಕೊಲೆ

Published on: Mar 11, 2025 11:55 AM